alex Certify ಪ್ರವಾಸಕ್ಕೆ ಹೊರಟವರಿಗೆ ಸಿಹಿ ಸುದ್ದಿ: ದಸರಾ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸಕ್ಕೆ ಹೊರಟವರಿಗೆ ಸಿಹಿ ಸುದ್ದಿ: ದಸರಾ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ

ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವತಿಯಿಂದ ಮೈಸೂರು ಸಾರಿಗೆ ವಿಭಾಗದ ಸಹಯೋಗದಲ್ಲಿ ದಸರಾ ಮಹೋತ್ಸವ ಅಂಗವಾಗಿ ಪ್ರವಾಸಿ ತಾಣಗಳಿಗೆ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದೆ.

ನಿಗಮದ ಯಶವಂತಪುರದ ಕೇಂದ್ರ ಕಚೇರಿಯ ಬುಕಿಂಗ್ ಕೌಂಟರ್, ಮೈಸೂರು ಸಾರಿಗೆ ವಿಭಾಗದ ಬುಕಿಂಗ್ ಕೌಂಟರ್, ಕೆಂಪೇಗೌಡ ಬುಕಿಂಗ್ ಕೌಂಟರ್, ರೆಡ್ ಬಸ್ ಪೋರ್ಟಲ್, ಕೆಎಸ್ಆರ್ಟಿಸಿ ಅವತಾರ್ ಮತ್ತು ನಿಗಮದ ಅಧಿಕೃತ ಟ್ರಾವೆಲ್ ಏಜೆಂಟರ ಮೂಲಕ ಪ್ರವಾಸಿಗರು ಮುಂಗಡವಾಗಿ ಬುಕಿಂಗ್ ಮಾಡಬಹುದು. ಮಾಹಿತಿಗಾಗಿ 080 43344334 ಸಂಪರ್ಕಿಸಬಹುದಾಗಿದೆ.

ಒಂದು ದಿನದ ಪ್ರವಾಸ

ಮೈಸೂರು ಸ್ಥಳೀಯ ಪ್ರವಾಸಕ್ಕೆ 440 ರೂ.,

ತಲಕಾಡು, ಮುಡುಕುತೊರೆ, ಸೋಮನಾಥಪುರ, ಶಿವನಸಮುದ್ರ, ಗಗನಚುಕ್ಕಿ, ಭರಚುಕ್ಕಿ ಜಲಪಾತ 550 ರೂ.

ಬೇಲೂರು, ಹಳೇಬೀಡು, ಶ್ರವಣಬೆಳಗೊಳ 1089 ರೂ.

ಕಾವೇರಿ ನಿಸರ್ಗಧಾಮ, ಅಬ್ಬೆಫಾಲ್ಸ್, ದುಬಾರಿ ಆನೆ ಶಿಬಿರ 979 ರೂ.

ಮೇಲುಕೋಟೆ, ಎಡೆಯೂರು, ಆದಿಚುಂಚನಗಿರಿ 660 ರೂ.

ನಂಜನಗೂಡು, ಹಿಮವದ್ ಗೋಪಾಲ ಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ 728 ರೂ.

ಎರಡು ದಿನದ ಪ್ರವಾಸ

ಭಾಗಮಂಡಲ, ತಲಕಾವೇರಿ, ದುಬಾರೆ ಆನೆ ಶಿಬಿರ 2860 ರೂ.

ಊಟಿ, ಸಸ್ಯೋಧ್ಯಾನ, ದೊಡ್ಡಬೆಟ್ಟ 2750 ರೂ.

3 ದಿನದ ಪ್ರವಾಸ

ಜೋಗ ಜಲಪಾತ, ಸಿಗಂದೂರು ಚೌಡೇಶ್ವರಿ ದೇವಾಲಯ 2145 ರೂ.

4 ದಿನದ ಪ್ರವಾಸ

ನಂಜನಗೂಡು, ಊಟಿ, ಕುನ್ನೂರು, ಕೊಡೈಕೆನಾಲ್ 5075 ರೂ.

ಟಿಬಿ ಡ್ಯಾಂ, ಹಂಪಿ, ಮಂತ್ರಾಲಯ 4.382 ರೂ.

5 ದಿನದ ಪ್ರವಾಸ

ಜೋಗ ಜಲಪಾತ, ಗೋವಾ, ಗೋಕರ್ಣ 6358 ರೂ. ದರ ನಿಗದಿ ಪಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...