ಕೊರೋನಾ ಸಾಂಕ್ರಾಮಿಕದಿಂದ ಅತಿಹೆಚ್ಚು ಹೊಡೆತ ಅನುಭವಿಸಿರುವ ಪ್ರವಾಸೋಧ್ಯಮ ಅಭಿವೃದ್ಧಿಗೆ ಸಚಿವಾಲಯ ವಿಭಿನ್ನ ಪ್ಲಾನ್ ಮಾಡಿದೆ. ಕಳೆದ ವರ್ಷವೇ ಮೈಸೂರು ರಸ್ತೆಗಳಲ್ಲಿ ಓಡಾಡುತ್ತಿರುವ ಡಬಲ್ ಡೆಕ್ಕರ್ ಬಸ್ ಈಗ ಹಂಪಿಯಲ್ಲು ಓಡಾಡಲಿವೆ. ಇದಕ್ಕಾಗಿ ಆರು ಬಸ್ ಗಳನ್ನು ಡಿಸೈನ್ ಮಾಡಿರುವ KSTDC ಇಲಾಖೆ, ಮೈಸೂರಿನಲ್ಲಿ ನಾಲ್ಕು ಹಾಗೂ ಹಂಪಿಯಲ್ಲಿ ಎರಡು ಬಸ್ಸುಗಳನ್ನ ನಿಗಧಿ ಮಾಡಿದೆ.
ಮೈಸೂರು ಅರಮನೆಯಿಂದ ಪ್ರಯಾಣ ಶುರು ಮಾಡುವ ಡಬಲ್ ಡೆಕ್ಕರ್ ಬಸ್ಗಳು, ಇಡೀ ಪಟ್ಟಣದ ಸಾಂಪ್ರದಾಯಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ವಿಸಿಟ್ ನೀಡಲಿದೆ. ಅಷ್ಟೇ ಅಲ್ಲಾ ಬೇಸಿಗೆ ರಜೆ ಹತ್ತಿರವಾಗುತ್ತಿರೊ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಆಕರ್ಷಿಸಲು ಇಲಾಖೆಯು 250 ರೂ. ಇದ್ದ ಟಿಕೆಟ್ ದರವನ್ನು 150 ರೂಪಾಯಿಗೆ ಇಳಿಸಿದೆ.
ಠಾಣೆಗಳಿಗೆ ಸಿಸಿ ಟಿವಿ ಅಳವಡಿಸಲು 60 ಕೋಟಿ ರೂ. ವ್ಯರ್ಥ…! ಬಾಂಬೆ ಹೈಕೋರ್ಟ್ ಅಭಿಮತ
ಮೈಸೂರು ದಸರಾ ಸಂದರ್ಭದಿಂದಲೇ ಮೈಸೂರಿನಲ್ಲಿ ಡಬಲ್ ಡೆಕ್ಕರ್ ಬಸ್ ಗಳು ಕಾರ್ಯಾಚರಣೆ ನಡೆಸುತ್ತಿವೆ. ಮತ್ತೊಂದು ಪ್ರಮುಖ ಪ್ರೇಕ್ಷಣೀಯ ಸ್ಥಳವಾದ ಹಂಪಿಯಲ್ಲಿ ಎರಡು ಬಸ್ಗಳು ಕಾರ್ಯಾಚರಣೆ ನಡೆಸಲಿವೆ. ಈ ಯೋಜನೆಯನ್ನು ಯಶಸ್ವಿಯಾಗಿಸುವ ಗುರಿ ಹೊಂದಿದ್ದು ಅವಶ್ಯಕ ನಿರ್ಧಾರಗಳನ್ನ ಕೈಗೊಳ್ಳಲಾಗಿದೆ ಎಂದು KSTDC ಎಂಡಿ ವಿಜಯ್ ಶರ್ಮಾ ತಿಳಿಸಿದ್ದಾರೆ.
KSTDC ನಂದಿ ಹಿಲ್ಸ್‌ನಲ್ಲಿ ಎರಡು ಸ್ಲಾಟ್‌ಗಳನ್ನ ಪರಿಚಯಿಸಿದೆ. ಆನ್ಲೈನ್ ನಲ್ಲಿ ಬುಕ್ ಮಾಡುವವರಿಗೆ 50% ಆಫರ್ ನೀಡುತ್ತಿದೆ. ಎರಡು ಸ್ಲಾಟ್‌ಗಳಲ್ಲಿ, ಮೊದಲನೆಯದು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಮತ್ತು ಮಧ್ಯಾಹ್ನ 12 ರಿಂದ ಸಂಜೆ 6 ರವರೆಗೆ, ಒಟ್ಟು 1,250 ಪ್ರವಾಸಿಗರನ್ನು ಆನ್‌ಲೈನ್ ಬುಕಿಂಗ್ ಮೂಲಕ ಅನುಮತಿಸಲಾಗುವುದು. ಜೊತೆಗೆ 1,250 ಪ್ರವಾಸಿಗರಿಗೆ ಗಿರಿಧಾಮಕ್ಕೆ ನೇರ ಪ್ರವೇಶ ದೊರೆಯಲಿದೆ.