alex Certify ಸಾಕು ಪ್ರಾಣಿಗಳಿಗೂ ಬಂತು ಸ್ಮಾರ್ಟ್​ ವಾಚ್; PES ವಿದ್ಯಾರ್ಥಿಗಳಿಂದ ವಿನ್ಯಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಕು ಪ್ರಾಣಿಗಳಿಗೂ ಬಂತು ಸ್ಮಾರ್ಟ್​ ವಾಚ್; PES ವಿದ್ಯಾರ್ಥಿಗಳಿಂದ ವಿನ್ಯಾಸ

ಹೊಸ ಜನರೇಷನ್​ ವಿದ್ಯಾಥಿರ್ಗಳು ಇಂದಿನ ಕಾಲಮಾನಕ್ಕೆ ತಕ್ಕಂತೆ ಇರುವ ಅಗತ್ಯಗಳನ್ನು ಗುರುತಿಸಿ ಸಂಶೋಧನೆ ಮಾಡುತ್ತಿದ್ದಾರೆ. ಇದಕ್ಕೊಂದು ಉದಾಹರಣೆ ಎಂಬಂತೆ ಬೆಂಗಳೂರಿನ ಪಿಇಎಸ್​ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಸಾಕುಪ್ರಾಣಿಗಳಿಗಾಗಿ ಸ್ಮಾರ್ಟ್​ ವಾಚ್​ ಅನ್ನು ವಿನ್ಯಾಸಗೊಳಿಸಿದ್ದಾರೆ.

ಪ್ರಾಣಿಯ ಬಗ್ಗೆ ನಿಗಾ ಇಡಲು ಬಯಸುವ ಪೋಷಕರಿಗೆ ಇದು ‘ಸ್ಮಾರ್ಟ್​’ ಪರಿಹಾರ ನೀಡಲಿದೆ. ವಿದ್ಯಾರ್ಥಿನಿಯರಾದ ಪಲ್ಲವಿ, ಪ್ರಾರ್ಥನಾ ಮತ್ತು ವಿಸ್ಮಯ ಈ ಪ್ರಯತ್ನಲ್ಲಿ ಯಶಕಂಡಿದ್ದಾರೆ.

ಪಿಇಎಸ್​ ವಿಶ್ವವಿದ್ಯಾಲಯದ ಸ್ಟಾರ್ಟ್​ಅಪ್​ಗಳ ನಿರ್ದೇಶಕ ಸುರೇಶ್​ ಈ ಪ್ರಯತ್ನದ ಬಗ್ಗೆ ಮಾಹಿತಿ ನೀಡಿ, “ನಾವು ಈಗಾಗಲೇ ಕೆಲವು ಗ್ರಾಹಕರನ್ನು ಹೊಂದಿದ್ದೇವೆ ಮತ್ತು ಒಂದೆರಡು ದಿನಗಳಲ್ಲಿ ದೊಡ್ಡಮಟ್ಟದ ಬಿಡುಗಡೆಗೆ ಯೋಜಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ವಾಚ್​ಅನ್ನು ಪ್ರಾಣಿಯ ಚಟುವಟಿಕೆಗಳನ್ನು ಪತ್ತೆಹಚ್ಚಲು ಅದರ ಕುತ್ತಿಗೆಗೆ ಜೋಡಿಸಬೇಕು. ಆಹಾರ ಸೇವನೆ ಮತ್ತು ಸರಿಯಾದ ಪ್ರಮಾಣವನ್ನು ಸೂಚಿಸುವ ಮೂಲಕ ಸಾಕುಪ್ರಾಣಿಗಳ ಜೀವಿತಾವಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...