ಹೊಸ ಜನರೇಷನ್ ವಿದ್ಯಾಥಿರ್ಗಳು ಇಂದಿನ ಕಾಲಮಾನಕ್ಕೆ ತಕ್ಕಂತೆ ಇರುವ ಅಗತ್ಯಗಳನ್ನು ಗುರುತಿಸಿ ಸಂಶೋಧನೆ ಮಾಡುತ್ತಿದ್ದಾರೆ. ಇದಕ್ಕೊಂದು ಉದಾಹರಣೆ ಎಂಬಂತೆ ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಸಾಕುಪ್ರಾಣಿಗಳಿಗಾಗಿ ಸ್ಮಾರ್ಟ್ ವಾಚ್ ಅನ್ನು ವಿನ್ಯಾಸಗೊಳಿಸಿದ್ದಾರೆ.
ಪ್ರಾಣಿಯ ಬಗ್ಗೆ ನಿಗಾ ಇಡಲು ಬಯಸುವ ಪೋಷಕರಿಗೆ ಇದು ‘ಸ್ಮಾರ್ಟ್’ ಪರಿಹಾರ ನೀಡಲಿದೆ. ವಿದ್ಯಾರ್ಥಿನಿಯರಾದ ಪಲ್ಲವಿ, ಪ್ರಾರ್ಥನಾ ಮತ್ತು ವಿಸ್ಮಯ ಈ ಪ್ರಯತ್ನಲ್ಲಿ ಯಶಕಂಡಿದ್ದಾರೆ.
ಪಿಇಎಸ್ ವಿಶ್ವವಿದ್ಯಾಲಯದ ಸ್ಟಾರ್ಟ್ಅಪ್ಗಳ ನಿರ್ದೇಶಕ ಸುರೇಶ್ ಈ ಪ್ರಯತ್ನದ ಬಗ್ಗೆ ಮಾಹಿತಿ ನೀಡಿ, “ನಾವು ಈಗಾಗಲೇ ಕೆಲವು ಗ್ರಾಹಕರನ್ನು ಹೊಂದಿದ್ದೇವೆ ಮತ್ತು ಒಂದೆರಡು ದಿನಗಳಲ್ಲಿ ದೊಡ್ಡಮಟ್ಟದ ಬಿಡುಗಡೆಗೆ ಯೋಜಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ವಾಚ್ಅನ್ನು ಪ್ರಾಣಿಯ ಚಟುವಟಿಕೆಗಳನ್ನು ಪತ್ತೆಹಚ್ಚಲು ಅದರ ಕುತ್ತಿಗೆಗೆ ಜೋಡಿಸಬೇಕು. ಆಹಾರ ಸೇವನೆ ಮತ್ತು ಸರಿಯಾದ ಪ್ರಮಾಣವನ್ನು ಸೂಚಿಸುವ ಮೂಲಕ ಸಾಕುಪ್ರಾಣಿಗಳ ಜೀವಿತಾವಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.