alex Certify ಎನ್‌ಫೀಲ್ಡ್ ಕ್ಲಾಸಿಕ್ 350 ಖರೀದಿಸಲು ಇಲ್ಲಿದೆ ಟಾಪ್ 5 ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎನ್‌ಫೀಲ್ಡ್ ಕ್ಲಾಸಿಕ್ 350 ಖರೀದಿಸಲು ಇಲ್ಲಿದೆ ಟಾಪ್ 5 ಕಾರಣ

ವಿಂಟೇಜ್ ಚಾರ್ಮ್‌ನಿಂದ ಭಾರೀ ಆಕರ್ಷಣೆ ಪಡೆದಿರುವ ಕ್ಲಾಸಿಕ್ ಮೋಟರ್‌ ಸೈಕಲ್‌ಗಳು, ರೆಟ್ರೋ ಡಿಸೈನ್ ಮತ್ತು ರೈಡಿಂಗ್ ಅನುಭೂತಿಯಿಂದ ಭಾರೀ ಬೇಡಿಕೆಯಲ್ಲಿವೆ.

ಇಂಥ ಬೈಕ್‌ಗಳಿಂದಲೇ ದೇಶದ ಸೂಪರ್‌ಬ್ರಾಂಡ್‌ಗಳಲ್ಲಿ ಒಂದಾಗಿರುವ ರಾಯಲ್ ಎನ್‌ಫೀಲ್ಡ್‌ ಇದೀಗ ಕ್ಲಾಸಿಕ್ 350 ಎಂಬ ಹೊಸ ಬೈಕ್‌ ಅನ್ನು ಬಿಡುಗಡೆ ಮಾಡಿದೆ. 1.84 ಲಕ್ಷ ರೂ.ನಿಂದ 2.15 ಲಕ್ಷ ರೂ.ಗಳ (ಎಕ್ಸ್‌ಶೋರೂಂ) ನಡುವೆ ಬೆಲೆ ಇರುವ ಈ ಬೈಕ್ ಅನ್ನು ನೀವು ಕೊಂಡುಕೊಳ್ಳಲು ಇಚ್ಛಿಸಿದಲ್ಲಿ ಅದಕ್ಕೆ ಟಾಪ್ 5 ಕಾರಣಗಳನ್ನು ಇಲ್ಲಿ ನೀಡಿದ್ದೇವೆ:

1. ಪ್ರಾಕ್ಟಿಕಾಲಿಟಿ

ರಾಯಲ್ ಎನ್‌ಫೀಲ್ಡ್‌ ಕ್ಲಾಸಿಕ್ 350 ತನ್ನ ಸದೃಢ ನಿರ್ಮಾಣದಿಂದ ಪ್ರಾಕ್ಟಿಕಲ್ ವಿನ್ಯಾಸ ಹೊಂದಿದ್ದು, ಮುಂಭಾಗದಲ್ಲಿ ಗ್ರೌಂಡ್ ಕ್ಲಿಯರೆನ್ಸ್‌ ಅನ್ನು ಹೆಚ್ಚಿಸಿದೆ (135ಎಂಎಂ ನಿಂದ 170ಎಂಎಂ) ಈ ಮೂಲಕ ಇನ್ನಷ್ಟು ಸುಧಾರಿತ ಟ್ರಾಕ್ಷನ್ ಅನ್ನು ಈ ಬೈಕ್ ಹೊಂದಿದೆ.

2. ಟರ್ನ್-ಬೈ-ಟರ್ನ್ ನೇವಿಗೇಷನ್

ಹೊಸ ಕ್ಲಾಸಿಕ್ 350ನಲ್ಲಿ ಸೆಮಿ-ಡಿಜಿಟಲ್ ಇನ್ಸ್‌ಟ್ರುಮೆಂಟ್‌ ಕ್ಲಸ್ಟರ್‌ ಇದ್ದು, ಎಲ್ಲ ಮಹತ್ವವಾದ ಅಂಶಗಳನ್ನು ತೋರುತ್ತದೆ. ಇದರಲ್ಲಿ ಹೈಲೈಟ್ ಆಗುವುದೆಂದರೆ ಟ್ರಿಪ್ಪರ್‌ ವ್ಯವಸ್ಥೆ — ತಿರುವಿನಿಂದ ತಿರುವಿನ ನೇವಿಗೇಷನ್ ಚಿಹ್ನೆಗಳನ್ನು ತೋರುವುದರೊಂದಿಗೆ ಎಷ್ಟು ದೂರದಲ್ಲಿ ತಿರುವು ಪಡೆಯಬೇಕೆಂದು ತೋರುವ ವರ್ಣರಂಜಿತ ಡಿಸ್ಪ್ಲೇ.

3. ರೀಫೈಂಡ್ ಮತ್ತು ಸುಧಾರಿತ ಇಂಜಿನ್

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350ಯ ಹೊಸ ಬೈಕ್‌ ಅನ್ನು ಮೆಟೀಯಾರ್‌ 350ಯ 349ಸಿಸಿ ಏರ್‌ಕೂಲ್ಡ್ ಇಂಜಿನ್‌‌ ಮೂಲಕ 20ಬಿಎಚ್‌ಪಿ, 6,100ಆರ್‌ಪಿಎಂ ಮತ್ತು 27ಎನ್‌ಎಂ ಗರಿಷ್ಠ ಟಾರ್ಕ್‌ ಅನ್ನು ಉತ್ಪಾದಿಸಬಲ್ಲದು. ಈ ಪವರ್‌ಪ್ಲಾಂಟ್‌ಗೆ 5-ಸ್ಪೀಡ್ ಗೇರ್‌ಬಾಕ್ಸ್‌ ನೀಡಲಾಗಿದೆ. ಇದರ ಮೂಲಕ ಹೊಸ ಕ್ಲಾಸಿಕ್ 350 ಬೈಕ್‌ನಲ್ಲಿ ಇನ್ನಷ್ಟು ಹೆಚ್ಚಿನ ಶಕ್ತಿ ನೀಡಲಾಗಿದೆ.

ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಬಗ್ಗೆ ಇಲ್ಲಿದೆ ಮಾಹಿತಿ

4. ಸಸ್ಪೆನ್ಶನ್ ಮತ್ತು ಬ್ರೇಕಿಂಗ್ ಹಾರ್ಡ್‌ವೇರ್‌

ಕ್ಲಾಸಿಕ್ 350ಯ ಹಿಂದಿನ ವರ್ಶನ್‌ಗೆ 35ಎಂಎಂ ಫೋರ್ಕ್‌‌ಗಳಿದ್ದು, ಹೊಸ ವರ್ಶನ್‌ಗೆ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌‌ಗಳನ್ನು 130ಎಂಎಂ ವೀಲ್ ಟ್ರಾವೆಲ್ ಮತ್ತು ಅವಳಿ-ಟ್ಯೂಬ್‌ ಎಮಲ್ಶನ್‌ ಶಾಕ್‌ ಅಬ್ಸಾರ್ಬರ್‌ಗಳೊಂದಿಗೆ, 6-ಹಂತದ ಹಿಂಬದಿ ಪ್ರೀಲೋಡ್‌ನೊಂದಿಗೆ, ನೀಡಲಾಗಿದೆ. ಇದರಿಂದಾಗಿ ಈ ಹೊಸ ಬೈಕ್‌ ಅನ್ನು ಗುಂಡಿ ತುಂಬಿದ ರಸ್ತೆಗಳಲ್ಲೂ ಇನ್ನಷ್ಟು ಸುಗಮವಾಗಿ ಓಡಿಸಬಹುದಾಗಿದೆ. ಇದರೊಂದಿಗೆ ಮುಂದಿನ ಚಕ್ರಕ್ಕೆ 300ಎಂಎಂ ಡ್ಯುಯಲ್ ಚಾನೆಲ್ ಎಬಿಎಸ್‌ ಹಾಗೂ ಹಿಂದಿನ ಚಕ್ರಕ್ಕೆ 270 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ಸಹ ನೀಡಲಾಗಿದ್ದು, ಹೆಚ್ಚಿನ ವೇಗದಲ್ಲೂ ಸಹ ಆರಾಮವಾಗಿ ಬ್ರೇಕ್ ಹಾಕಬಹುದಾಗಿದೆ.

5. ಬಣ್ಣಗಳ ಆಯ್ಕೆ

ಹೊಸ ಬೈಕ್ ಖರೀದಿ ಮಾಡಲು ಇದೇನೂ ಹೇಳಿಕೊಳ್ಳುವ ಕಾರಣವಲ್ಲ. ಆದರೆ ಇಡೀ ಪ್ಯಾಕೇಜ್‌ ಇನ್ನಷ್ಟು ಆಕರ್ಷಕವಾಗಿ ಕಾಣಲು ಬಣ್ಣ ಮುಖ್ಯವಾಗಿದೆ. ನಿಮ್ಮ ಬಜೆಟ್ ಮತ್ತು ಆದ್ಯತೆ ಮೇಲೆ ಕ್ಲಾಸಿಕ್ 350 ಬೈಕ್‌ ಅನ್ನು ಮೋನೋಟೋನ್ ಬಣ್ಣಗಳಾದ ಕೆಂಪು, ಹಸಿರು, ಕಂದು ಬಣ್ಣಗಳಲ್ಲಿ ಪಡೆಯಬಹುದಾಗಿದೆ. ಇನ್ನು ರೆಟ್ರೋ ಬಣ್ಣಗಳಾದ ಕಂಚು ಮತ್ತು ಕೆಂಪು ಬಣ್ಣಗಳಲ್ಲೂ ಸಹ ಪಡೆಯಬಹುದಾಗಿದೆ.

new classic rear.jpg

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...