ಟೋಕಿಯೋ ಒಲಿಂಪಿಕ್ಗೆ ಕೊರೊನಾ ಸಂಕಷ್ಟ ಎದುರಾಗಿರುವ ನಡುವೆಯೇ ಜಪಾನ್ನಲ್ಲಿ ಶುಕ್ರವಾರ ನಾಪತ್ತೆಯಾಗಿರುವ ಉಗಾಂಡಾದ ಕ್ರೀಡಾಪಟುಗಾಗಿ ಹುಡುಕಾಟ ಜೋರಾಗಿದೆ.
ನಾಪತ್ತೆಯಾಗಿರುವ 20 ವರ್ಷದ ಜ್ಯೂಲಿಯಸ್ ಸೆಕಿಟೋಲೆಕೊ ಒಸಾಕೊ ಪ್ರಾಂತ್ಯದ ಇಜುಮಿಸಾನೊದಲ್ಲಿ 9 ಸದಸ್ಯರನ್ನ ಹೊಂದಿರುವ ಉಗಾಂಡ ತಂಡದ ಸದಸ್ಯನಾಗಿ ತರಬೇತಿ ಪಡೆಯುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜ್ಯೂಲಿಯಸ್ ನಾಪತ್ತೆಯಾಗಿದ್ದಾನೆ ಎಂಬ ವಿಚಾರ ಶುಕ್ರವಾರ ಸಂಜೆ ಸುಮಾರಿಗೆ ಸಹ ಕ್ರೀಡಾಪಟುಗಳ ಗಮನಕ್ಕೆ ಬಂದಿದೆ. ಕ್ರೀಡಾಪಟುಗಳಿಗೆ ಲಾಲಾರಸ ಪರೀಕ್ಷೆ ನಡೆಸುತ್ತಿದ್ದ ವೇಳೆಯಲ್ಲಿ ಜ್ಯೂಲಿಯಸ್ ಗೈರಾಗಿದ್ದರು. ಈ ವೇಳೆ ಅವರ ಹೋಟೆಲ್ ರೂಮ್ ಪರಿಶೀಲನೆ ಮಾಡಿದಾಗ ಅಲ್ಲೂ ಸಹ ಅವರು ಕಂಡುಬಂದಿಲ್ಲ. ಜ್ಯೂಲಿಯಸ್ ಶುಕ್ರವಾರ ಬೆಳಗ್ಗೆ ಕೊನೆಯ ಬಾರಿಗೆ ಎಲ್ಲರೆದುರು ಕಾಣಿಸಿಕೊಂಡಿದ್ದರು.
ಹೋಟೆಲ್ನಲ್ಲಿ ಜ್ಯೂಲಿಯಸ್ ಕಾಣದಿರುವ ಹಿನ್ನೆಲೆಯಲ್ಲಿ ಒಲಿಂಪಿಕ್ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.