ಟೋಕಿಯೋ ಒಲಿಂಪಿಕ್ ಆರಂಭಕ್ಕೆ ದಿನಗಣನೆ ಬಾಕಿ ಇರುವಾಗಲೇ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ಏರ್ಪೋರ್ಟ್ನಿಂದ ಹೊರಡಲಿರುವ ಮೊದಲ ಬ್ಯಾಚ್ನ ಭಾರತೀಯ ಕ್ರೀಡಾಪಟುಗಳಿಗೆ ಔಪಚಾರಿಕ ಬಿಳ್ಕೋಡುಗೆ ಸಮಾರಂಭ ಇಂದು ನಡೆಯಲಿದೆ.
ಒಟ್ಟು 88 ಮಂದಿ ಇರುವ ಬ್ಯಾಚ್ ಇದಾಗಿದ್ದು ಇದರಲ್ಲಿ 54 ಮಂದಿ ಆಟಗಾರರು, ಸಹಾಯಕ ಸಿಬ್ಬಂದಿ ಹಾಗೂ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಪ್ರತಿನಿಧಿಗಳು ಸೇರಿದ್ದಾರೆ. ಈ ಸದಸ್ಯರಿಗೆ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಔಪಚಾರಿಕೆ ಬೀಳ್ಕೋಡುಗೆ ನೀಡಲಿದ್ದಾರೆ. ಈ ಔಪಚಾರಿಕ ಕಾರ್ಯಕ್ರಮದಲ್ಲಿ ರಾಜ್ಯ ಸಚಿವ ನಿಸಿತ್ ಪ್ರಾಮಾಣಿಕ್ ಕೂಡ ಭಾಗಿಯಾಲಿದ್ದಾರೆ.
ಆರ್ಚರಿ, ಹಾಕಿ, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಜುಡೋ, ಜಿಮ್ನಾಸ್ಟಿಕ್ಸ್ ಹಾಗೂ ವೇಟ್ಲಿಫ್ಟಿಂಗ್ ಎಂಬ 8 ಕ್ರೀಡೆಗಳ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಇಂದು ದೆಹಲಿಯಿಂದ ಟೋಕಿಯೋಗೆ ಹಾರಲಿದ್ದಾರೆ. ಈ ಬ್ಯಾಚ್ನಲ್ಲಿ ಹಾಕಿ ಆಟಗಾರರ ಸಂಖ್ಯೆ ಹೆಚ್ಚಿದೆ.
ಆಟಗಾರರ ಸುರಕ್ಷತೆಯನ್ನ ಗಮನದಲ್ಲಿರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಪ್ರತಿಯೊಬ್ಬ ಗಣ್ಯ ವ್ಯಕ್ತಿಗಳಿಗೂ ಕೋವಿಡ್ ಪರೀಕ್ಷೆ ಮಾಡಲಾಗಿದೆ. ನೆಗೆಟಿವ್ ವರದಿ ಹೊಂದಿರುವವರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಾಮಾಜಿಕ ಅಂತರ, ಫೇಸ್ ಮಾಸ್ಕ್ ಸೇರಿದಂತೆ ಕೊರೊನಾ ಮಾರ್ಗಸೂಚಿಗಳನ್ನ ಈ ಕಾರ್ಯಕ್ರಮದಲ್ಲಿ ಪಾಲಿಸಲಾಗುತ್ತದೆ. ಭಾರತೀಯ ಶೂಟಿಂಗ್ ತಂಡವು ಶನಿವಾರ ಟೋಕಿಯೋಗೆ ತೆರಳಿದೆ. ಈ ಬಾರಿ ಒಲಿಂಪಿಕ್ನಲ್ಲಿ 127 ಭಾರತೀಯ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗಿಯಾಗುತ್ತಿರೋದು ಸಹ ಒಂದು ದಾಖಲೆಯಾಗಿದೆ.
ಭಾರತೀಯ ಶೂಟಿಂಗ್ ತಂಡದ ಸದಸ್ಯರ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು ವರದಿಗಾಗಿ ಕಾಯುತ್ತಿದ್ದಾರೆ. ಏಸ್ ಇಂಡಿಯನ್ ವೇಟ್ಲಿಫ್ಟರ್ ಸೈಕೋಮ್ ಮೀರಾಬಾರಿ ಚಾನು ಸಹ ಶುಕ್ರವಾರ ಟೋಕಿಯೋಗೆ ಆಗಮಿಸಿದ್ದಾರೆ .