ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆ ಟೋಕಿಯೋ ಒಲಿಂಪಿಕ್ನಿಂದ ಗಿನಿಯಾ ರಾಷ್ಟ್ರ ಹಿಂದೆ ಸರಿದಿದೆ ಎಂದು ಪಶ್ಚಿಮ ಆಫ್ರಿಕಾದ ರಾಜ್ಯ ಕ್ರೀಡಾ ಸಚಿವರು ಅಧಿಕೃತ ಮಾಹಿತಿ ಹೊರಡಿಸಿದ್ದಾರೆ.
ಕೋವಿಡ್ 19 ರೂಪಾಂತರಿಗಳ ಆತಂಕದ ಹಿನ್ನೆಲೆ ಗಿನಿಯಾ ರಾಷ್ಟ್ರದ ಆಟಗಾರರ ಆರೋಗ್ಯವನ್ನು ಗಮನದಲ್ಲಿರಿಸಿ ಟೋಕಿಯೋ ಒಲಿಂಪಿಕ್ನಿಂದ ಹಿಂದೆ ಸರಿಯುವ ನಿರ್ಧಾರ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಟೋಕಿಯೋ ಒಲಿಂಪಿಕ್ ಆರಂಭಕ್ಕೂ ಕೇವಲ 2 ದಿನಗಳ ಮುಂಚಿತವಾಗಿ ಗಿನಿಯಾ ರಾಷ್ಟ್ರ ಈ ನಿರ್ಧಾರವನ್ನು ಪ್ರಕಟಿಸಿದೆ. ಆದರೆ ಗಿನಿಯಾದ ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ ಇದು ಆಟಗಾರರ ಆರೋಗ್ಯಕ್ಕಿಂತ ಹೆಚ್ಚಾಗಿ ಆರ್ಥಿಕ ವೆಚ್ಚವನ್ನ ಪರಗಣಿಸಿ ಕೈಗೊಂಡ ನಿರ್ಧಾರವಾಗಿದೆ ಎಂದು ಹೇಳಿದೆ. ಅಂದಹಾಗೆ ಗಿನಿಯಾ ರಾಷ್ಟ್ರ ಇಲ್ಲಿಯವರೆಗೆ ಒಲಿಂಪಿಕ್ಸ್ನಲ್ಲಿ ಪದಕವನ್ನು ಸಂಪಾದಿಸಿಲ್ಲ.
ಇನ್ನು ಏಪ್ರಿಲ್ ತಿಂಗಳಿನಲ್ಲಿಯೇ ಉತ್ತರ ಕೊರಿಯಾ ರಾಷ್ಟ್ರವು ಕೊರೊನಾ ವೈರಸ್ನಿಂದ ಆಟಗಾರರನ್ನ ರಕ್ಷಿಸುವ ಸಲುವಾಗಿ ತಾವು ಒಲಿಂಪಿಕ್ನಿಂದ ಹಿಂದೆ ಸರಿಯುತ್ತಿರೋದಾಗಿ ಘೋಷಣೆ ಮಾಡಿತ್ತು.