alex Certify ಕೊರೊನಾಗೆ ಹೆದರಿ ಒಲಿಂಪಿಕ್​ನಿಂದ ಹಿಂದೆ ಸರಿದಿದೆ ಈ ರಾಷ್ಟ್ರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾಗೆ ಹೆದರಿ ಒಲಿಂಪಿಕ್​ನಿಂದ ಹಿಂದೆ ಸರಿದಿದೆ ಈ ರಾಷ್ಟ್ರ..!

ಕೋವಿಡ್​ 19 ಸಾಂಕ್ರಾಮಿಕದ ಹಿನ್ನೆಲೆ ಟೋಕಿಯೋ ಒಲಿಂಪಿಕ್​​ನಿಂದ ಗಿನಿಯಾ ರಾಷ್ಟ್ರ ಹಿಂದೆ ಸರಿದಿದೆ ಎಂದು ಪಶ್ಚಿಮ ಆಫ್ರಿಕಾದ ರಾಜ್ಯ ಕ್ರೀಡಾ ಸಚಿವರು ಅಧಿಕೃತ ಮಾಹಿತಿ ಹೊರಡಿಸಿದ್ದಾರೆ.

ಕೋವಿಡ್​ 19 ರೂಪಾಂತರಿಗಳ ಆತಂಕದ ಹಿನ್ನೆಲೆ ಗಿನಿಯಾ ರಾಷ್ಟ್ರದ ಆಟಗಾರರ ಆರೋಗ್ಯವನ್ನು ಗಮನದಲ್ಲಿರಿಸಿ ಟೋಕಿಯೋ ಒಲಿಂಪಿಕ್​ನಿಂದ ಹಿಂದೆ ಸರಿಯುವ ನಿರ್ಧಾರ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಟೋಕಿಯೋ ಒಲಿಂಪಿಕ್​ ಆರಂಭಕ್ಕೂ ಕೇವಲ 2 ದಿನಗಳ ಮುಂಚಿತವಾಗಿ ಗಿನಿಯಾ ರಾಷ್ಟ್ರ ಈ ನಿರ್ಧಾರವನ್ನು ಪ್ರಕಟಿಸಿದೆ. ಆದರೆ ಗಿನಿಯಾದ ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ ಇದು ಆಟಗಾರರ ಆರೋಗ್ಯಕ್ಕಿಂತ ಹೆಚ್ಚಾಗಿ ಆರ್ಥಿಕ ವೆಚ್ಚವನ್ನ ಪರಗಣಿಸಿ ಕೈಗೊಂಡ ನಿರ್ಧಾರವಾಗಿದೆ ಎಂದು ಹೇಳಿದೆ. ಅಂದಹಾಗೆ ಗಿನಿಯಾ ರಾಷ್ಟ್ರ ಇಲ್ಲಿಯವರೆಗೆ ಒಲಿಂಪಿಕ್ಸ್​ನಲ್ಲಿ ಪದಕವನ್ನು ಸಂಪಾದಿಸಿಲ್ಲ.

ಇನ್ನು ಏಪ್ರಿಲ್​ ತಿಂಗಳಿನಲ್ಲಿಯೇ ಉತ್ತರ ಕೊರಿಯಾ ರಾಷ್ಟ್ರವು ಕೊರೊನಾ ವೈರಸ್​ನಿಂದ ಆಟಗಾರರನ್ನ ರಕ್ಷಿಸುವ ಸಲುವಾಗಿ ತಾವು ಒಲಿಂಪಿಕ್​ನಿಂದ ಹಿಂದೆ ಸರಿಯುತ್ತಿರೋದಾಗಿ ಘೋಷಣೆ ಮಾಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...