alex Certify BIG NEWS: ಭಾರತೀಯ ಮಹಿಳಾ ಬಾಕ್ಸರ್​ ಲವ್ಲೀನಾ ಬೊರ್ಗೋಹೈನ್​ಗೆ ಒಲಿಂಪಿಕ್​ ಕಂಚಿನ ಪದಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತೀಯ ಮಹಿಳಾ ಬಾಕ್ಸರ್​ ಲವ್ಲೀನಾ ಬೊರ್ಗೋಹೈನ್​ಗೆ ಒಲಿಂಪಿಕ್​ ಕಂಚಿನ ಪದಕ..!

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಸೆಮಿಫೈನಲ್​ ತಲುಪಿದ್ದ ಮಹಿಳಾ ಬಾಕ್ಸರ್​ ಲವ್ಲೀನಾ ಬೊರ್ಗೊಹೈನ್​ ಕಂಚಿನ ಪದಕವನ್ನು ಸಂಪಾದಿಸಿದ್ದಾರೆ.

ಟರ್ಕಿಯ ಬುಸೆನಾಜ್ ಸುರ್ಮೆನೆಲ್ ವಿರುದ್ಧ ಸೆಮಿಫೈನಲ್​ ಪಂದ್ಯದಲ್ಲಿ ಸೆಣೆಸಿದ್ದ ಲವ್ಲೀನಾ 5-0 ಅಂತರದಲ್ಲಿ ಪರಾಭವಗೊಂಡರು. ಟರ್ಕಿಯ ವಿಶ್ವ ಶ್ರೇಯಾಂಕಿತೆ ವಿರುದ್ಧ ಹೋರಾಡಿ ಸೋಲನ್ನು ಅನುಭವಿಸಿದ್ದರೂ ಸಹ ಲವ್ಲಿನಾ ದೇಶಕ್ಕೆ ಕಂಚಿನ ಪದಕ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ವಾರ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಜಯ ಸಾಧಿಸಿ ಸೆಮಿ ಫೈನಲ್​ಗೆ ಎಂಟ್ರಿ ಕೊಡುವ ಮೂಲಕ ಒಲಿಂಪಿಕ್​​ ಬಾಕ್ಸಿಂಗ್​ ವಿಭಾಗದಲ್ಲಿ ದೇಶಕ್ಕೆ ಮೂರನೇ ಪದಕ ತಂದುಕೊಡುತ್ತಿರುವ ಆಟಗಾರ್ತಿ ಎನಿಸಿದ್ದರು. ಇಲ್ಲಿಯವರೆಗೆ ಈ ವಿಭಾಗದಲ್ಲಿ ಮೇರಿಕೋಮ್​ ಹಾಗೂ ವಿಜಯೇಂದರ್​ ಸಿಂಗ್​ ಮಾತ್ರ ದೇಶಕ್ಕೆ ಪದಕ ತಂದುಕೊಟ್ಟವರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...