alex Certify BIG BREAKING: ರಜತ ಪದಕ ವಿಜೇತೆ ಮೀರಾಬಾಯಿ ಚಾನು ಚಿನ್ನದ ಪದಕದ ಕನಸು ಮತ್ತೊಮ್ಮೆ ಜೀವಂತ….! ಹೇಗೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ರಜತ ಪದಕ ವಿಜೇತೆ ಮೀರಾಬಾಯಿ ಚಾನು ಚಿನ್ನದ ಪದಕದ ಕನಸು ಮತ್ತೊಮ್ಮೆ ಜೀವಂತ….! ಹೇಗೆ ಗೊತ್ತಾ….?

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಪದಕ ತಂದುಕೊಟ್ಟ ಸಾಯಿಕೋಮ್​ ಮೀರಾಬಾಯಿ ಚಾನುಗೆ ಚಿನ್ನದ ಪದಕ ಸಂಪಾದಿಸಲು ಇನ್ನೂ ಒಂದು ಅವಕಾಶ ಸಿಕ್ಕಿದೆ.  49 ಕೆಜಿ ವೇಟ್​ ಲಿಫ್ಟಿಂಗ್​ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಚೀನಾದ ಆಟಗಾರ್ತಿ ಜಿಹುಇ ಹೋಗೆ ಶನಿವಾರ ಡೋಪಿಂಗ್​ ಟೆಸ್ಟ್​ ನಡೆಸಲಾಗಿದೆ. ಈ ಟೆಸ್ಟ್​ನಲ್ಲಿ ಜಹುಇ ಅನುತ್ತೀರ್ಣರಾದಲ್ಲಿ ಮೀರಾಬಾಯಿ ಚಾನು ಮೊದಲ ಸ್ಥಾನಕ್ಕೆ ಏರಲಿದ್ದಾರೆ. ಇದರ ಅರ್ಥ ಅವರಿಗೆ ಬೆಳ್ಳಿ ಪದಕದ ಬದಲು ಚಿನ್ನದ ಪದಕ ಸಿಗಲಿದೆ.

ಚೀನಾದ ಆಟಗಾರ್ತಿ ಜಿಹುಇ ಹೋ 210 ಕೆಜಿ ತೂಕವನ್ನ ಎತ್ತುವ ಮೂಲಕ ಚಿನ್ನದ ಪದಕವನ್ನು ಸಂಪಾದಿಸಿದ್ದರು. ಈ ಮೂಲಕ ಒಲಿಂಪಿಕ್​ನಲ್ಲಿ ಹೊಸ ರೆಕಾರ್ಡ್​ನ್ನೂ ಮಾಡಿದ್ದರು. ಆದರೆ ಇದಾದ ಬಳಿಕ ಜಿಹುಇ ಮೇಲೆ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಅವರನ್ನ ಡೋಪಿಂಗ್​ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪರೀಕ್ಷೆಯಲ್ಲಿ ಜಿಹೋಇ ಫೇಲ್​ ಆದಲ್ಲಿ ಬೆಳ್ಳಿ ಪದಕ ವಿಜೇತ ಮೀರಾಬಾಯಿ ಚಿನ್ನದ ಪದಕವನ್ನ ಸಂಪಾದಿಸಲಿದ್ದಾರೆ. ಹಾಗೂ ಈ ಸ್ಪರ್ಧೆಯಲ್ಲಿ ಕಂಚಿನ ಪದಕ ಸಂಪಾದಿಸಿದ್ದ ಇಂಡೋನೇಷಿಯಾದ ಆಟಗಾರ್ತಿ ವಿಂಡಿ ಕೆಂಟಿಗೆ ರಜತ ಪದಕವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.

ಅಂದಹಾಗೆ ಈ ವಿಚಾರದಲ್ಲಿ ಡಬ್ಲುಎಡಿಎ( ವಿಶ್ವ ಉದ್ದೀಪನ ನಿಗ್ರಹ ಘಟಕ) ಈವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಅಲ್ಲದೇ ಸ್ಪರ್ಧೆ ಮುಗಿದ ಬಳಿಕ ಭಾಗವಹಿಸಿದ ಪ್ರತಿಯೊಬ್ಬ ಸ್ಪರ್ಧಾಳುವಿಗೆ ಡೋಪಿಂಗ್​ ಟೆಸ್ಟ್​ ನಡೆಸಲಾಗುತ್ತದೆ ಅನ್ನೋದನ್ನ ನಾವಿಲ್ಲಿ ಗಮನಿಸಬೇಕು.

ಒಂದು ವೇಳೆ ಮೀರಾಬಾಯಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದಲ್ಲಿ ಒಲಿಂಪಿಕ್​ನಲ್ಲಿ ಸ್ವರ್ಣ ಪದಕ ಪಡೆದ ಮೊದಲ ಹಾಗೂ ವೇಟ್​ಲಿಫ್ಟಿಂಗ್​ನಲ್ಲಿ ಚಿನ್ನದ ಹುಡುಗಿ ಎನಿಸಿಕೊಂಡ ಮೊದಲ ಆಟಗಾರ್ತಿ ಇವರಾಗಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...