alex Certify ಟೋಕಿಯೋ ಒಲಂಪಿಕ್ಸ್: ಚಿನ್ನಕ್ಕಾಗಿ ಮಹಾರಾಷ್ಟ್ರದ ಎಂಟು ಆಟಗಾರರ ಸೆಣೆಸಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೋಕಿಯೋ ಒಲಂಪಿಕ್ಸ್: ಚಿನ್ನಕ್ಕಾಗಿ ಮಹಾರಾಷ್ಟ್ರದ ಎಂಟು ಆಟಗಾರರ ಸೆಣೆಸಾಟ

ವಿಶ್ವದ ಅತ್ಯಂತ ಪ್ರತಿಷ್ಠಿತ ಸ್ಪರ್ಧೆಯಾದ ಟೋಕಿಯೊ ಒಲಿಂಪಿಕ್ಸ್ ಗೆ ತಯಾರಿ ಭರದಿಂದ ನಡೆದಿದೆ. ಪಂದ್ಯಾವಳಿ ಜುಲೈ 23 ರಿಂದ ಆಗಸ್ಟ್ 8 ರವರೆಗೆ ಜಪಾನ್‌ನ ಟೋಕಿಯೊದಲ್ಲಿ ನಡೆಯಲಿದೆ. ಈ ವರ್ಷ 18 ವಿವಿಧ ಕ್ರೀಡೆಗಳಿಗೆ 126 ಆಟಗಾರರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮಹಾರಾಷ್ಟ್ರದ ಎಂಟು ಆಟಗಾರರು ಇದ್ರಲ್ಲಿ ಸೇರಿದ್ದಾರೆ. ರಾಜ್ಯದ ಆರು ಆಟಗಾರರು 23 ರಿಂದ ನಡೆಯುವ ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಉಳಿದ 2 ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಮಹಾರಾಷ್ಟ್ರದ ಯಾವ ಯಾವ ಆಟಗಾರರು ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳಲಿದ್ದಾರೆಂಬ ವರದಿ ಇಲ್ಲಿದೆ.

ತೇಜಸ್ವಿನಿ ಸಾವಂತ್ (50 ಮೀ ರೈಫಲ್ 3 ಸ್ಥಾನ) : ಭಾರತದ ಅನುಭವಿ ಶೂಟರ್ ತೇಜಸ್ವಿನಿ ಸಾವಂತ್ 14 ನೇ ಏಷ್ಯನ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಿದ್ದರು. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಒಲಿಂಪಿಕ್ಸ್ ನಲ್ಲಿ ಆಡುವ ಅವರ ಕನಸು 40ನೇ ವಯಸ್ಸಿನಲ್ಲಿ ನನಸಾಗಿದೆ. ವಿಶ್ವಕಪ್‌ನಲ್ಲಿ ಭಾರತ ಪರ ಚಿನ್ನದ ಪದಕ ಗಳಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಲಿಂಪಿಕ್ಸ್ ನಲ್ಲಿ ಆಡುವ ಕನಸು ಎರಡು ಬಾರಿ  ಚೂರಾಗಿತ್ತು. 2008 ರ ಬೀಜಿಂಗ್ ಒಲಿಂಪಿಕ್ಸ್ ಮತ್ತು ನಂತರ 2012 ರ ಲಂಡನ್ ಒಲಿಂಪಿಕ್ಸ್ ಗೆ ಅವರು ಮಾಡಿದ ಪ್ರಯತ್ನಗಳು ವಿಫಲವಾದ್ದವು.

ರಾಹಿ ಸರ್ನೋಬತ್ (ಕ್ರೀಡೆ 50 ಮೀ ಪಿಸ್ತೂಲ್) : ತೇಜಸ್ವಿನಿ ಸಾವಂತ್ ರಿಂದ ಸ್ಫೂರ್ತಿ ಪಡೆದ ರಾಹಿ ಸರ್ನೋಬತ್ ಎರಡನೇ ಬಾರಿಗೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿದ್ದಾರೆ. ಅವರು 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಪ್ರದರ್ಶನ ನೀಡಲಿದ್ದಾರೆ. 2012 ರ ಲಂಡನ್ ಒಲಿಂಪಿಕ್ಸ್ ನಲ್ಲಿ ಭಾರತದ ಶೂಟಿಂಗ್ ತಂಡದಲ್ಲಿ ಅತ್ಯಂತ ಕಿರಿಯ ಶೂಟರ್ ಆಗಿದ್ದರು.

ಅವಿನಾಶ್ ಸೇಬಲ್ (ಸ್ಟೀಪಲ್‌ಚೇಸ್ ರೇಸ್) : ಮಹಾರಾಷ್ಟ್ರದ ಮರಾಠವಾಡದ ರೈತ ಕುಟುಂಬದ ಅವಿನಾಶ್ ಸೇಬಲ್ 3000 ಮೀಟರ್ ಸ್ಟೀಪಲ್‌ಚೇಸ್ ಓಟದಲ್ಲಿ ಪರಿಣಿತರು. ಈ ವರ್ಷ ಅವರು 8: 20.21 ರಲ್ಲಿ ದೂರವನ್ನು ಕ್ರಮಿಸಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. 12 ನೇ ತರಗತಿ ಮುಗಿಸಿದ ನಂತರ ಅವಿನಾಶ್ ಸೈನ್ಯಕ್ಕೆ ಸೇರಿದ್ದರು.

ಪ್ರವೀಣ್ ಜಾಧವ್ (ಬಿಲ್ಲುಗಾರಿಕೆ) : 2016 ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಪ್ರವೀಣ್ ಕಂಚಿನ ಪದಕ ಗಳಿಸಿದ್ದರು. ಕ್ರೀಡಾ ಕೋಟಾದಿಂದ 2017 ರಲ್ಲಿ ಪ್ರವೀಣ್ ಸೈನ್ಯಕ್ಕೆ ಸೇರಿದ್ದಾರೆ. ಈ ಬಾರಿ ಓಲಂಪಿಕ್ಸ್ ನಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ಚಿರಾಗ್ ಶೆಟ್ಟಿ (ಬ್ಯಾಡ್ಮಿಂಟನ್ ಪುರುಷರ ಡಬಲ್ಸ್) : ಪುರುಷರ ಡಬಲ್ಸ್ ನಲ್ಲಿ ಮುಂಬೈನ ಚಿರಾಗ್ ಶೆಟ್ಟಿ ಸ್ಪರ್ಧಿಸಲಿದ್ದಾರೆ. ಸತ್ವಿಕ್ಸೈರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ ಥೈಲ್ಯಾಂಡ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪುರುಷರ ಡಬಲ್ಸ್ ನಲ್ಲಿ ಚೀನಾ ಜೋಡಿ ಸೋಲಿಸುವ ಮೂಲಕ ಎಲ್ಲರ ಗಮನ ಸೆಳೆದಿತ್ತು.

ವಿಷ್ಣು ಸರವಣನ್ (ನೌಕಾಯಾನ) : ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಮೂರು ಕ್ರೀಡಾಪಟುಗಳು ನೌಕಾಯಾನ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. 2016 ರಲ್ಲಿ ಹಾಂಕಾಂಗ್‌ನಲ್ಲಿ ನಡೆದ ನೌಕಾಯಾನ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ನೌಕಾಯಾನ ಕ್ರೀಡೆಯು ರಾಯಲ್ ಕ್ರೀಡೆಯಾಗಿದೆ. ವಿಷ್ಣು ಬಳಸುವ ದೋಣಿಯ ಬೆಲೆ 9 ಲಕ್ಷ ರೂಪಾಯಿ. ದೋಣಿಯನ್ನುಭಾರತೀಯ ನೌಕಾಪಡೆ ನೀಡಿದ್ದು, ಅವರು ತರಬೇತಿಗಾಗಿ ತಿಂಗಳಿಗೆ 50,000 ರೂಪಾಯಿ ಖರ್ಚು ಮಾಡುತ್ತಾರೆ.

ಸ್ವರೂಪ್ ಕೊಲ್ಹಾಪುರ (ಪ್ಯಾರಾ ಶೂಟಿಂಗ್ -10 ಮೀ ರೈಫಲ್) : ಸ್ವರೂಪ್, ಟೋಕಿಯೋ ಪ್ಯಾರಾ-ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಬಾಲ್ಯದಲ್ಲಿ ಪೋಲಿಯೊದಿಂದ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡರು. ಅವರ ತಂದೆ, ಹೆಗಲ ಮೇಲೆ ಹೊತ್ತುಕೊಂಡು ಶಾಲೆಗೆ ಕರೆದೊಯ್ಯುತ್ತಿದ್ದರು. ಸ್ವರೂಪ್, ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ 10 ಪದಕಗಳನ್ನು ಮತ್ತು ರಾಷ್ಟ್ರೀಯ ಸ್ಪರ್ಧೆಗಳಲ್ಲಿ 20 ಪದಕಗಳನ್ನು ಗೆದ್ದಿದ್ದಾರೆ. ಆಗಸ್ಟ್ 30 ರಂದು ನಡೆಯಲಿರುವ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಸ್ಪರ್ಧೆಯಲ್ಲಿ ಅವರು ತಮ್ಮ ಕೌಶಲ್ಯವನ್ನು ತೋರಿಸಲಿದ್ದಾರೆ.

ಸುಯಾಶ್ ಜಾಧವ್ (ಪ್ಯಾರಾ ಈಜುಗಾರ) : 50 ಮೀಟರ್ ಬಟರ್ಫ್ಲೈ, 200 ಮೀ ವೈಯಕ್ತಿಕ ಮಿಡಲ್ ವೇಟ್ ಈಜು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದ್ಯುತ್ ಆಘಾತಕ್ಕೆ ಒಳಗಾಗಿದ್ದ ಸುಯಾಶ್ ಎರಡೂ ಕೈಗಳನ್ನು ಕಳೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...