ಟೋಕಿಯೋ ಒಲಿಂಪಿಕ್ಸ್ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಭಾರತೀಯ ಪುರುಷರ ಹಾಕಿ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕವನ್ನು ಸಂಪಾದಿಸುವ ಮೂಲಕ ಟೀಂ ಇಂಡಿಯಾ ಬರೋಬ್ಬರಿ 41 ವರ್ಷಗಳಿಂದ ಮಾಡಲಾಗದ ಸಾಧನೆಯನ್ನು ಮಾಡಿ ತೋರಿಸಿದಂತಾಗಿದೆ. ಇನ್ನು ಸ್ವತಃ ಪ್ರಧಾನಿ ಮೋದಿ ಕರೆ ಮಾಡಿ ಟೀಂ ಇಂಡಿಯಾ ಹಾಕಿ ತಂಡದ ಕೋಚ್ ಗ್ರಹಾಂ ರೈಡ್ ಹಾಗೂ ಸ್ಕಿಪರ್ ಮನ್ಪ್ರೀತ್ ಸಿಂಗ್ ದೂರವಾಣಿ ಕರೆ ಮೂಲಕ ಮಾತನಾಡಿ ಶುಭಾಶಯ ಕೋರಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮನ್ಪ್ರೀತ್ಗೆ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಜರ್ಮನಿ ವಿರುದ್ಧ 5-4 ಅಂತರದಲ್ಲಿ ಗೆಲುವು ಸಾಧಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ರು.
‘‘ಮನ್ಪ್ರೀತ್ ನಿಮಗೆ ತುಂಬು ಹೃದಯದ ಶುಭಾಶಯಗಳು. ನೀವು ಹಾಗೂ ನಿಮ್ಮ ಇಡೀ ತಂಡ ಹೆಮ್ಮೆಯ ಕಾರ್ಯವನ್ನು ಮಾಡಿದೆ. ನಿಮ್ಮ ಸಾಧನೆಯನ್ನು ಕಂಡು ಇಡೀ ದೇಶವೇ ಕುಣಿದು ಕುಪ್ಪಳಿಸುತ್ತಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿದೆ. ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರನಿಗೂ ನಾನು ಶುಭಾಶಯ ಕೋರುತ್ತೇನೆ ’’ ಎಂದು ಮೋದಿ ಹೇಳಿದ್ರು.
ನೀವೆಲ್ಲರೂ ಟೋಕಿಯೋದಿಂದ ವಾಪಸ್ಸಾದ ಬಳಿಕ ಖಂಡಿತವಾಗಿಯೂ ನಿಮ್ಮನ್ನೆಲ್ಲ ಭೇಟಿ ಮಾಡುತ್ತೇನೆ. ಸಂಪೂರ್ಣ ದೇಶವು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ರು.
ಕೊರೊನಾ ಸಂಕಷ್ಟದ ನಡುವೆಯೇ ಪುರಿ ಜಗನ್ನಾಥ ದೇಗುಲ ಆರಂಭಕ್ಕೆ ತಯಾರಿ: ಭಕ್ತರು ಪಾಲಿಸಬೇಕಿದೆ ಈ ಷರತ್ತು
ಇದೇ ವೇಳೆ ಕೋಚ್ ಜೊತೆಯೂ ಮಾತನಾಡಿದ ಪ್ರಧಾನಿ ಮೋದಿ, ಶುಭಾಶಯಗಳು, ನಾವು ಹೊಸ ಇತಿಹಾಸವನ್ನು ರಚಿಸಿದ್ದೇವೆ ಎಂದು ಹೇಳಿದ್ರು.
ಇದಕ್ಕೆ ಉತ್ತರಿಸಿದ ಕೋಚ್ ರೈಡ್, ಸೆಮಿಫೈನಲ್ ಬಳಿಕ ನೀವು ಆಡಿದ ಮಾತುಗಳು ನಮಗೆ ಸ್ಪೂರ್ತಿ ನೀಡಿದ್ದವು. ಧನ್ಯವಾದ ಎಂದು ಹೇಳಿದ್ರು.
ನಿಮ್ಮ ಕಠಿಣ ಪರಿಶ್ರಮಕ್ಕೆ ಕೊನೆಗೂ ಫಲ ಸಿಕ್ಕಿದೆ. ನಾನಂತೂ ಸಿಕ್ಕಾಪಟ್ಟೆ ಹೆಮ್ಮೆ ವ್ಯಕ್ತಪಡಿಸುತ್ತೇನೆ ಎಂದು ಕೊನೆಯಲ್ಲಿ ಪ್ರಧಾನಿ ಮೋದಿ ಹೇಳಿದ್ರು.
ಭಾರತೀಯ ಪುರುಷರ ಹಾಕಿ ತಂಡವು ಬರೋಬ್ಬರಿ 41 ವರ್ಷಗಳ ಬಳಿಕ ಒಲಿಂಪಿಕ್ನಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ.