
ಆನ್ಲೈನ್‌ನಲ್ಲಿ ಮಕ್ಕಳ ವಿಡಿಯೋಗಳಿಗೆ ಪ್ರತ್ಯೇಕವಾದ ಫ್ಯಾನ್ ಬೇಸ್ ಇದೆ. ಮಕ್ಕಳ ಚಿನ್ನಾಟ ಹಾಗೂ ತುಂಟಾಟಗಳ ವಿಡಿಯೋ ನೋಡುತ್ತಾ ನಮ್ಮ ಬೇಸರ ಕಳೆಯಬಹುದು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಹೊಸ ವಿಡಿಯೋವೊಂದರಲ್ಲಿ, ಇನ್ನೂ ತೊದಲು ಮಾತನಾಡುವ ಪುಟಾಣಿಯೊಬ್ಬಳು ಅಲೆಕ್ಸಾಗೆ ತನ್ನ ಮೆಚ್ಚಿನ ಹಾಡು ’ವೆಕೇಷನ್’ ಪ್ಲೇ ಮಾಡುವಂತೆ ಕೋರುತ್ತಿರುವುದನ್ನು ನೋಡಬಹುದಾಗಿದೆ.
ಐಫೋನ್ 13 ಬೆಲೆಯಲ್ಲಿ ಭಾರೀ ಇಳಿಕೆ….! ಖರೀದಿಸಲು ಇದು ಸಕಾಲ
ತನ್ನ ಮೆಚ್ಚಿನ ಹಾಡು ಬಿತ್ತರಗೊಳ್ಳುತ್ತಲೇ ಈ ಪುಟ್ಟಿಯ ಮೊಗದಲ್ಲಿ ಮೂಡುವ ಮಂದಹಾಸದೊಂದಿಗೆ ಆಕೆಯ ಮುದ್ದಾದ ಕುಣಿತ ನೋಡುವುದೇ ಆನಂದ.
ಇನ್‌ಸ್ಟಾಗ್ರಾಂನಲ್ಲಿ ’ಡರ್ಟಿ ಹೆಡ್ಸ್’ ಖಾತೆಯಲ್ಲಿ ಶೇರ್ ಮಾಡಲ್ಪಟ್ಟ ಈ ವಿಡಿಯೋಗೆ ಎರಡು ದಶಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳು ಸಿಕ್ಕಿವೆ.
https://youtu.be/Hx7Nn2POcm8