ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಚಿಕ್ಕಮಕ್ಕಳ ವಿಡಿಯೋ ನೋಡುವುದೇ ಚೆಂದ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್ ಆಗಿದೆ. ಅಂಬೆಗಾಲಿಡುವ ಮಗುವೊಂದು ತನ್ನ ಮೊದಲ ಹೆಜ್ಜೆಗಳನ್ನು ಇಡುವ ಸಮಯವು ಅದ್ಭುತವಾಗಿರುತ್ತದೆ. ಆದರೆ ಇಲ್ಲೊಬ್ಬ ಪುಟಾಣಿ ಹೆಜ್ಜೆ ಇಡುವ ಬದಲು ನೃತ್ಯ ಮಾಡಲು ಪ್ರಾರಂಭಿಸಿದ್ದಾನೆ. ಇದರ ಕ್ಯೂಟ್ ವಿಡಿಯೋ ವೈರಲ್ ಆಗಿದೆ.
ಪತ್ರಕರ್ತೆ ಮಾರಿಯಾ ಶ್ರೀವರ್ ಇದನ್ನು ಶೇರ್ ಮಾಡಿದ್ದಾರೆ. ಈ ಕ್ಯೂಟ್ ವಿಡಿಯೋ ಇದಾಗಲೇ ಐದು ಮಿಲಿಯನ್ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಮಗು ತನ್ನ ಮೊದಲ ಹೆಜ್ಜೆಗಳನ್ನು ಇಡುವುದನ್ನು ನೀವು ನೋಡಬಹುದು. ಹಿನ್ನಲೆಯಲ್ಲಿ ಸಂಗೀತ ಪ್ಲೇ ಆಗುತ್ತಿದೆ. ಈ ಸಂಗೀತ ಕೇಳಿ ಮಗುವಿಗೆ ಸ್ಫೂರ್ತಿ ಬಂದ ಹಾಗಿದೆ. ಆದ್ದರಿಂದ ಹೆಜ್ಜೆ ಇಡುವ ಬದಲು ಡಾನ್ಸ್ ಮಾಡಿದ್ದಾನೆ. ಈ ಕ್ಷಣವನ್ನು ರೆಕಾರ್ಡಿಂಗ್ ಮಾಡುತ್ತಿರುವ ಅವರ ಕುಟುಂಬಕ್ಕೂ ಇದು ಅಚ್ಚರಿ ತಂದಿದೆ. ಹೆಜ್ಜೆ ಇಡುತ್ತಾನೆ ಎಂದುಕೊಂಡರೆ ಡಾನ್ಸ್ ಮಾಡಿರುವುದಾಗಿ ಬರೆದುಕೊಂಡಿದ್ದಾರೆ.
https://youtu.be/5cy174j_yuA