ಎರಡು ವರ್ಷದ ಬಾಲಕಿಯು ತನ್ನ ತುಟಿಯನ್ನು ಕಚ್ಚಿದ ಹಾವಿಗೆ ಪ್ರತಿಕ್ರಿಯೆಯಾಗಿ ಅದನ್ನು ತಿರುಗಿಸಿ ಕಚ್ಚಿ ಕೊಂದಿದ್ದಾಳೆ. ಆಗಸ್ಟ್ 10ರಂದು ಟರ್ಕಿಯ ಬಿಂಗೋಲ್ ಬಳಿಯ ಕಾಂತಾರ್ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಮಗುವಿನ ನೆರೆಹೊರೆಯವರು ಪ್ರಥಮ ಚಿಕಿತ್ಸೆ ನೀಡಿ, ತಕ್ಷಣವೇ ಮಕ್ಕಳ ಆಸ್ಪತ್ರೆಗೆ ದಾಖಲಿಸಿದರು. 24 ಗಂಟೆಗಳ ಕಾಲ ನಿಗಾ ಇರಿಸಿದ್ದು, ಈಗ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದೆ.
ಎರಡು ವರ್ಷದ ಮಗು ತನ್ನ ಮನೆಯ ಗಾರ್ಡನ್ನಲ್ಲಿ ಏಕಾಏಕಿ ಜೋರಾಗಿ ಕಿರುಚಲು ಪ್ರಾರಂಭಿಸಿದೆ. ತಕ್ಷಣ ನೆರೆಹೊರೆಯವರು ಧಾವಿಸಿ ಬಂದಾಗ ಅವಳ ತುಟಿಯಲ್ಲಿ ಕಚ್ಚಿದ ಗುರುತು ಮತ್ತು ಬಾಯಿಯಲ್ಲಿ 50 ಸೆಂಟಿಮೀಟರ್ ಉದ್ದದ ಹಾವು ಇರುವುದನ್ನು ಕಂಡು ಆಘಾತಕ್ಕೊಳಗಾದರು.
ಆ ಹುಡುಗಿಯ ತಂದೆ ಮೆಹ್ಮೆತ್ ಎರ್ಕಾನ್ ಘಟನೆಯನ್ನು ವಿವರಿಸಿದ್ದು, ಘಟನೆ ನಡೆದಾಗ ನಾನು ಬೇರೆ ಕೆಲಸದಲ್ಲಿದ್ದೆ. ಬಾಲಕಿ ಆರೋಗ್ಯವಾಗಿರುವುದರಿಂದ ವಿಷಕಾರಿಯಲ್ಲದ ಹಾವು ಕಚ್ಚಿದೆ ಎಂದು ತಿಳಿಸಿದ್ದಾರೆ.