alex Certify ತನಗೆ ಕಚ್ಚಿದ ಹಾವನ್ನು ತಿರುಗಿಸಿ ಕಚ್ಚಿ ಕೊಂದ ಬಾಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನಗೆ ಕಚ್ಚಿದ ಹಾವನ್ನು ತಿರುಗಿಸಿ ಕಚ್ಚಿ ಕೊಂದ ಬಾಲೆ…!

ಎರಡು ವರ್ಷದ ಬಾಲಕಿಯು ತನ್ನ ತುಟಿಯನ್ನು ಕಚ್ಚಿದ ಹಾವಿಗೆ ಪ್ರತಿಕ್ರಿಯೆಯಾಗಿ ಅದನ್ನು ತಿರುಗಿಸಿ ಕಚ್ಚಿ ಕೊಂದಿದ್ದಾಳೆ. ಆಗಸ್ಟ್​ 10ರಂದು ಟರ್ಕಿಯ ಬಿಂಗೋಲ್​ ಬಳಿಯ ಕಾಂತಾರ್​ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಮಗುವಿನ ನೆರೆಹೊರೆಯವರು ಪ್ರಥಮ ಚಿಕಿತ್ಸೆ ನೀಡಿ, ತಕ್ಷಣವೇ ಮಕ್ಕಳ ಆಸ್ಪತ್ರೆಗೆ ದಾಖಲಿಸಿದರು. 24 ಗಂಟೆಗಳ ಕಾಲ ನಿಗಾ ಇರಿಸಿದ್ದು, ಈಗ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದೆ.

ಎರಡು ವರ್ಷದ ಮಗು ತನ್ನ ಮನೆಯ ಗಾರ್ಡನ್​ನಲ್ಲಿ ಏಕಾಏಕಿ ಜೋರಾಗಿ ಕಿರುಚಲು ಪ್ರಾರಂಭಿಸಿದೆ. ತಕ್ಷಣ ನೆರೆಹೊರೆಯವರು ಧಾವಿಸಿ ಬಂದಾಗ ಅವಳ ತುಟಿಯಲ್ಲಿ ಕಚ್ಚಿದ ಗುರುತು ಮತ್ತು ಬಾಯಿಯಲ್ಲಿ 50 ಸೆಂಟಿಮೀಟರ್​ ಉದ್ದದ ಹಾವು ಇರುವುದನ್ನು ಕಂಡು ಆಘಾತಕ್ಕೊಳಗಾದರು.

ಆ ಹುಡುಗಿಯ ತಂದೆ ಮೆಹ್ಮೆತ್​ ಎರ್ಕಾನ್​ ಘಟನೆಯನ್ನು ವಿವರಿಸಿದ್ದು, ಘಟನೆ ನಡೆದಾಗ ನಾನು ಬೇರೆ ಕೆಲಸದಲ್ಲಿದ್ದೆ. ಬಾಲಕಿ ಆರೋಗ್ಯವಾಗಿರುವುದರಿಂದ ವಿಷಕಾರಿಯಲ್ಲದ ಹಾವು ಕಚ್ಚಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...