alex Certify ಪ್ರೀತಿಯ ಅಜ್ಜನಿಗೆ ಮೊಮ್ಮಗಳ ಕಣ್ಣೀರ ವಿದಾಯ: ಹೃದಯಸ್ಪರ್ಶಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಯ ಅಜ್ಜನಿಗೆ ಮೊಮ್ಮಗಳ ಕಣ್ಣೀರ ವಿದಾಯ: ಹೃದಯಸ್ಪರ್ಶಿ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪುಟ್ಟ ಕಂದನ ವಿಡಿಯೋ ನಿಮ್ಮ ಹೃದಯವನ್ನು ಕರಗಿಸುತ್ತದೆ. ಮೂರು ವರ್ಷದ ಕ್ಯಾಮಿ ಇನ್ಸ್ಟಾಗ್ರಾಂ ಸೆನ್ಸೇಷನ್ ಆಗಿದ್ದಾಳೆ.

ಈಕೆಯ ತಾಯಿ ಕ್ಯಾಮಿಯ ಇನ್ಸ್ಟಾಗ್ರಾಂ ಅನ್ನು ನಿರ್ವಹಿಸುತ್ತಿದ್ದು, ಆಗಾಗ್ಗೆ ಇಂಟ್ರೆಸ್ಟಿಂಗ್ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಹಳೆ ವಿಡಿಯೋ ಮತ್ತೆ ವೈರಲ್ ಆಗಿದ್ದು, ನಿಮ್ಮ ಕಣ್ಣಂಚಲ್ಲಿ ನೀರು ತರಿಸದೆ ಇರಲಾರದು.

ಮಾರ್ಚ್ 2021 ರಲ್ಲಿ ಹಂಚಿಕೊಂಡ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ವೈರಲ್ ಆಗಿದೆ. ಅಜ್ಜ ಹಾಗೂ ಮೊಮ್ಮಗಳ ಪ್ರೀತಿಯ ಕ್ಷಣವನ್ನು ಈ ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ.

ವಿಡಿಯೋದಲ್ಲಿ ಪುಟ್ಟ ಕ್ಯಾಮಿ ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದಾಳೆ. ಆಕೆ ತನ್ನ ಅಜ್ಜನನ್ನು ಬಿಟ್ಟು ತೆರಳುತ್ತಿರುವುದರಿಂದ ಬಹಳ ದುಃಖತಪ್ತಳಾಗಿ ಫ್ಲೈಯಿಂಗ್ ಕಿಸ್ ನೀಡಿದ್ದಾಳೆ. ಕಂದಮ್ಮ ಹೊರಡುವಾಗ ತನ್ನ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಕ್ಯಾಮಿ ತನ್ನ ಅಜ್ಜನೊಂದಿಗೆ ಅದ್ಭುತವಾದ ಬಾಂಧವ್ಯವನ್ನು ಹಂಚಿಕೊಂಡಿದ್ದಾಳೆ ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿಯಾಗಿದೆ.

ಈ ವಿಡಿಯೋ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಾಲಕಿಯ ಮುಗ್ಧ ನಡೆಗೆ ಮನಸೋತಿದ್ದಾರೆ. ವಿಡಿಯೋ ನೋಡಿದ ಹಲವರು ಕಣ್ಣೀರು ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...