ಮಾರಕ ಕ್ಯಾನ್ಸರ್ ಕುರಿತು ವಿಶ್ವಾದ್ಯಂತ ಅಧ್ಯಯನ ನಡೆಯುತ್ತಲೇ ಇದೆ. ಸುಮಾರು ಅರ್ಧದಷ್ಟು ಕ್ಯಾನ್ಸರ್ಗಳು ಪ್ರಾಥಮಿಕವಾಗಿ ತಂಬಾಕು ಅಥವಾ ಆಲ್ಕೋಹಾಲ್ನಿಂದಲೇ ಬರುತ್ತಿದೆ ಎಂದು ಇತ್ತೀಚಿನ ಬೃಹತ್ ಜಾಗತಿಕ ಅಧ್ಯಯನವು ಕಂಡುಕೊಂಡಿದೆ.
ಬಿಲ್ ಗೇಟ್ಸ್ ಫೌಂಡೇಶನ್ ಧನಸಹಾಯ ಪಡೆದ ವಿಶಾಲವಾದ ಸಂಶೋಧನಾ ಕಾರ್ಯಕ್ರಮದ ಭಾಗವಾಗಿ ನಡೆಸಲ್ಪಟ್ಟ ಅಧ್ಯಯನದ ವರದಿ ಲ್ಯಾನ್ಸೆಟ್ನಲ್ಲಿ ಪ್ರಕಟವಾಗಿದೆ. ವಿಶ್ವದಾದ್ಯಂತ 44.4 ಪ್ರತಿಶತದಷ್ಟು ಕ್ಯಾನ್ಸರ್ ಸಾವುಗಳು ತಂಬಾಕು ಅಥವಾ ಆಲ್ಕೋಹಾಲ್ನ ಅಪಾಯಕಾರಿ ಅಂಶಕ್ಕೆ ಕಾರಣವಾಗಿದೆ ಎಂದು ತೀರ್ಮಾನಕ್ಕೆ ಬರಲಾಗಿದೆ.
ಗ್ಲೋಬಲ್ ರ್ಬಡನ್ ಆಫ್ ಡಿಸೀಸ್ ಸ್ಟಡಿ ಒಂದು ಸಮಗ್ರ ಪ್ರಾದೇಶಿಕ ಮತ್ತು ಜಾಗತಿಕ ಸಂಶೋಧನಾ ಕಾರ್ಯಕ್ರಮವಾಗಿದ್ದು, ಪ್ರಪಂಚದಾದ್ಯಂತ ಹೆಚ್ಚಿನ ದೇಶಗಳ ಸಾವಿರಾರು ಸಂಶೋಧಕರನ್ನು ಒಳಗೊಂಡಿದೆ. ಅಧ್ಯಯನವು 34 ಅಪಾಯಕಾರಿ ಅಂಶಗಳ ಪ್ರಭಾವವನ್ನು ವಿಶ್ಲೇಷಿಸಿದೆ. ಅಪಾಯಕಾರಿ ಅಂಶಗಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುವುದರಿಂದ ಕ್ಯಾನ್ಸರ್ ಮರಣ ಪ್ರಮಾಣವು ಕಡಿಮೆಯಾಗುತ್ತದೆ” ಎಂದು ಅಧ್ಯಯನವು ತೀರ್ಮಾನಿಸಿದೆ. ಇದರರ್ಥ ತಡೆಗಟ್ಟುವಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅಧ್ಯಯನವು ಕಂಡುಹಿಡಿದಿದೆ.
ಧೂಮಪಾನವು ಜಾಗತಿಕವಾಗಿ ಕ್ಯಾನ್ಸರ್ಗೆ ಪ್ರಮುಖ ಅಪಾಯಕಾರಿ ಅಂಶವಾಗಿ ಮುಂದುವರೆದಿದೆ, ಆರಂಭಿಕ ರೋಗನಿರ್ಣಯ ಮತ್ತು ಪರಿಣಾಮಕಾರಿ ಚಿಕಿತ್ಸೆಗಳು ತಡೆಗಟ್ಟುವ ಪ್ರಯತ್ನಗಳನ್ನು ಹೆಚ್ಚಿಸುವ ಪ್ರಯತ್ನಗಳಾಗಬೇಕು ಎಂದು ಅಧ್ಯಯನವು ಕಂಡುಕೊಂಡಿದೆಯಲ್ಲದೇ ಪುರುಷ ಮತ್ತು ಮಹಿಳೆಯರ ಕ್ಯಾನ್ಸರ್ ಸಾವಿನ ಅನುಪಾತದ ಬಗ್ಗೆ ವಿವರಣೆ ನೀಡಲಾಗಿದೆ.