ಆಲೂಗಡ್ಡೆ ಹಾಕಿ ಮಾಡಿದ ಅಡುಗೆ ಬಹಳ ರುಚಿಯಾಗಿರುತ್ತದೆ. ಹಾಗಾಗಿ ಹೆಚ್ಚಿನವರು ಆಲೂಗಡ್ಡೆ ಬಳಸಿ ಮಾಡಿದ ಅಡುಗೆ ಇಷ್ಟಪಡುತ್ತಾರೆ. ಆದರೆ ಕೆಲವೊಮ್ಮೆ ಅದು ಬೇಯುವುದು ತುಂಬಾ ತಡವಾಗುತ್ತದೆ. ಹಾಗಾಗಿ ಆಲೂಗಡ್ಡೆ ಬೇಗ ಬೇಯಲು ಈ ವಿಧಾನ ಅನುಸರಿಸಿ.
*ಆಲೂಗಡ್ಡೆ ಸಿಪ್ಪೆಯ ಜೊತೆ ಕುಕ್ಕರ್ ನಲ್ಲಿ ಬೇಯಿಸುವಾಗ 2 ಭಾಗಗಳಾಗಿ ಕತ್ತರಿಸಿ ಬೇಯಿಸಿ ಇದರಿಂದ ಅದು ಬಹಳ ಬೇಗನೆ ಬೇಯುತ್ತದೆ. ಹಾಗೇ ಆಲೂಗಡ್ಡೆ ಬೇಯಿಸುವಾಗ ಉಪ್ಪನ್ನು ಹಾಕಿದರೂ ಕೂಡ ಬೇಗ ಬೇಯುತ್ತದೆ.
*ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಬೇಯಿಸುವಾಗ ಸಣ್ಣ ತುಂಡುಗಳಾಗಿ ಕತ್ತರಿಸಿ ಬೇಯಿಸಿ. ಇದರಿಂದ ಬೇಗ ಬೇಯುತ್ತದೆ. ಅದರ ಜೊತೆ ಉಪ್ಪನ್ನು ಕೂಡ ಸೇರಿಸಿ.
*ಆಲೂಗಡ್ಡೆಯನ್ನು ತಣ್ಣೀರಿನಲ್ಲಿ ಹಾಕಿ ಬೇಯಿಸಿದರೆ ಬೇಯುವುದು ತುಂಬಾ ತಡವಾಗುತ್ತದೆ. ಬಿಸಿ ನೀರಿನಲ್ಲಿ ಹಾಕಿ ಬೇಯಿಸಿದರೆ ಬಹಳ ಬೇಗ ಬೇಯುತ್ತದೆ.