ತಮಿಳುನಾಡಿನ ಬಿಜೆಪಿ ಘಟಕವು ಹಿಂದೂಗಳ ಹಬ್ಬದ ಸಂಭ್ರಮಾಚರಣೆಯನ್ನು ಮೊಟಕುಗೊಳಿಸುವ ಡಿಎಂಕೆ ಸರ್ಕಾರದ ಪ್ರಯತ್ನವನ್ನು ವಿರೋಧಿಸುವ ನಿಮಿತ್ತ ಮನೆಯ ಮುಂದೆಯೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಜನತೆ ಬಳಿ ಮನವಿ ಮಾಡಿದೆ.
ಈ ವಿಚಾರವಾಗಿ ಮಾತನಾಡಿದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ , ಬಿಜೆಪಿಯ ಪರವಾಗಿ ನಾವು ಭಕ್ತರ ನಿವಾಸದ ಎದುರು 1 ಲಕ್ಷಕ್ಕೂ ಅಧಿಕ ಗಣೇಶ ಮೂರ್ತಿಯನ್ನು ಸ್ಥಾಪನೆ ಮಾಡುವ ಗುರಿ ಹೊಂದಿದ್ದೇವೆ. ಈ ಪ್ರಯತ್ನದಲ್ಲಿ ನಮಗೆ ತಮಿಳುನಾಡು ಜನತೆಯ ಸಹಾಯ ಬೇಕು ಎಂದು ಹೇಳಿದ್ರು.
ಡಿಎಂಕೆ ಸರ್ಕಾರವು ಉದ್ದೇಶ ಪೂರ್ವಕವಾಗಿಯೇ ಗಣೇಶ ಚತುರ್ಥಿ ಹಬ್ಬಕ್ಕೆ ನಿರ್ಬಂಧ ಹೇರುವ ಮೂಲಕ ಹಿಂದೂ ವಿರೋಧಿ ಕೆಲಸ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.
ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ಗೆ ಅಂಚೆ ಮೂಲಕ ಗಣೇಶ ಚತುರ್ಥಿ ಶುಭಾಶಯ ಕೋರುವಂತೆ ಪಕ್ಷದ ಕಾರ್ಯಕರ್ತರಿಗೆ ಅಣ್ಣಾಮಲೈ ಸೂಚನೆ ನೀಡಿದ್ದಾರೆ.
ಕೊರೊನಾ ಮೂರನೇ ಅಲೆಯ ಮುನ್ನೆಚ್ಚರಿಕಾ ಕ್ರಮವಾಗಿ ಡಿಎಂಕೆ ಸರ್ಕಾರವು ಗಣೇಶ ಮೂರ್ತಿ ಮೆರವಣಿಗೆಯನ್ನು ವಿಜೃಂಭಣೆಯಿಂದ ಆಚರಿಸಲು ನಿಷೇಧ ಹೇರುವ ಬಗ್ಗೆ ಹೇಳಿಕೆ ನೀಡಿದೆ. ಸೆಪ್ಟೆಂಬರ್ 8ರಂದು ಮದರ್ ಮೇರಿ ಜಯಂತಿಯಂದು ನಾಗಪಟ್ಟಣಂನಂತಹ ಜಿಲ್ಲೆಯಲ್ಲಿ ಚರ್ಚ್ಗಳ ಸಾರ್ವಜನಿಕ ಆಚರಣೆಗೂ ಡಿಎಂಕೆ ಸರ್ಕಾರ ಕೊಕ್ ನೀಡಿತ್ತು.