2021ನೇ ಸಾಲಿನ ಪ್ರತಿಷ್ಟಿತ ಕ್ಯಾನೆ ಫಿಲಂ ಫೆಸ್ಟಿವಲ್ ಪ್ರಶಸ್ತಿ ಪ್ರದಾನ ಸಮಾರಂಭದೊಂದಿಗೆ ಅಂತ್ಯ ಕಂಡಿದೆ. ಈ ವರ್ಷದ ಸ್ಪರ್ಧೆಯ ತೀರ್ಪುಗಾರರು ಪ್ರಶಸ್ತಿ ವಿಜೇತ ಸಿನಿಮಾ ಹಾಗೂ ಪ್ರದರ್ಶನಗಳ ಹೆಸರನ್ನ ಘೋಷಣೆ ಮಾಡಿದ್ರು.
ಅಮೆರಿಕನ್ ಸಿನಿಮಾ ನಿರ್ದೇಶಕ ಸ್ಪೈಕ್ ಲೀ ಅಧ್ಯಕ್ಷತೆಯಲ್ಲಿ ತೀರ್ಪುಗಾರರಾದ ನಿರ್ದೇಶಕ ಮತಿಇ ಡಯೋಪ್, ಗಾಯಕಿ ಹಾಗೂ ಗೀತರಚನೆಕಾರ್ತಿ ಮೈಲೀನ್ ಫಾರ್ಮರ್, ನಟಿ ಹಾಗೂ ನಿರ್ದೇಶಕಿ ಮ್ಯಾಗಿ ಗಿಲ್ಹೇನಾರ್, ಬರಹಗಾರ್ತಿ ಹಾಗೂ ನಿರ್ದೇಶಕಿ ಜೆಸ್ಸಿಕಾ ಹೌಸ್ನರ್, ನಟಿ/ನಿರ್ದೇಶಕಿ ಮೆಲಾನಿ ಲಾರೆಂಟ್, ನಿರ್ದೇಶಕ ಕ್ಲೆಬರ್ ಮೆಂಡೊನಾ ಫಿಲ್ಹೋ, ನಟಿ ತಹರ್ ರಹೀಮ್ ಹಾಗೂ ಮತ್ತೋರ್ವ ನಟ ಸಾಂಗ್ ಕಾಂಗ್ ಹೋ ವಿಜೇತರ ಹೆಸರನ್ನ ಘೋಷಣೆ ಮಾಡಿದ್ರು.
ಕ್ಯಾನೆ ಫಿಲಂ ಫೆಸ್ಟಿವಲ್ನ ಅತ್ಯುನ್ನತ ಪ್ರಶಸ್ತಿಯಾದ ಪಾಮ್ ಡಿ ಓರ್ ನಟಿ ಜೂಲಿಯಾ ಡುಕೋರ್ನೌ ಅವರಿಗೆ ಸಂದಿದೆ. ಟೈಟೇನ್ ಸಿನಿಮಾದ ನಿರ್ದೇಶನದ ಮೂಲಕ ಜೂಲಿಯಾ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಮೂಲಕ ಕ್ಯಾನೆ ಫಿಲಂ ಫೆಸ್ಟಿವಲ್ನಲ್ಲಿ ಈ ಅತ್ಯುನ್ನತ ಪ್ರಶಸ್ತಿಯನ್ನ ಗೆದ್ದ ವಿಶ್ವದ ಎರಡನೇ ಮಹಿಳೆ ಎನಿಸಿದ್ದಾರೆ. 1993ರಲ್ಲಿ ದಿ ಪಿಯಾನೋ ಸಿನಿಮಾಗಾಗಿ ಜೇನ್ ಕ್ಯಾಂಪಿಯನ್ ಈ ಪ್ರಶಸ್ತಿಯನ್ನ ಮೊಟ್ಟ ಮೊದಲ ಬಾರಿಗೆ ಪಡೆದಿದ್ದರು.
ಕೊರೊನಾದಿಂದಾಗಿ ಕಳೆದ ವರ್ಷ ಈ ಅತ್ಯುನ್ನತ ಫಿಲಂ ಫೆಸ್ಟಿವಲ್ ರದ್ದಾಗಿತ್ತು. ಹೀಗಾಗಿ 2019ರಲ್ಲಿ ಪ್ಯಾರಸೈಟ್ ಸಿನಿಮಾಗಾಗಿ ನಿರ್ದೇಶಕ ಬಾಂಗ್ ಜಂಗ್ ಮುಡಿಗೆ ಪಾಮ್ ಡಿ ಓರ್ ಸಂದ ಬಳಿಕ ಈ ಪ್ರಶಸ್ತಿ ಕಳೆದೊಂದು ವರ್ಷದಿಂದ ಯಾರ ಮಡಿಲಿಗೂ ಸೇರಿರಲಿಲ್ಲ. ಇದೀಗ ಈ ಅತ್ಯುನ್ನತ ಪ್ರಶಸ್ತಿಯು ಮಹಿಳಾ ನಿರ್ದೇಶಕಿಯ ಮುಡಿಗೇರಿದೆ.
ಕ್ಯಾನೆ ಫೆಸ್ಟಿವಲ್ 2021ನೇ ಸಾಲಿನ ಪ್ರಶಸ್ತಿ ಹಾಗೂ ವಿಜೇತರ ಪಟ್ಟಿ ಇಲ್ಲಿದೆ:
ಪಾಮ್ ಡಿ ಓರ್ : ಟೈಟೇನ್
ಗ್ರ್ಯಾಂಡ್ ಫ್ರಿಕ್ಸ್ (ಡ್ರಾ) : ಎ ಹಿರೋ ಹಾಗೂ ಕಂಪಾರ್ಟ್ಮೆಂಟ್ ನಂ.6
ಜ್ಯೂರಿ ಫ್ರೈಜ್ (ಡ್ರಾ) : ಅಹೆಡ್ಸ್ ನೀ ಹಾಗೂ ಮೆಮೋರಿಯಾ
ಅತ್ಯುತ್ತಮ ನಟಿ : ರೆನೇಟ್ ರೈನ್ಸೆ (ದಿ ವರ್ಸ್ಟ್ ಪರ್ಸನ್ ಇನ್ ದಿ ವರ್ಲ್ಡ್)
ಅತ್ಯುತ್ತಮ ನಟ : ಕ್ಯಾಲೆಬ್ ಲ್ಯಾಂಡ್ರಿ ಜೋನ್ಸ್ (ನೈಟ್ರಾಮ್)
ಅತ್ಯುತ್ತಮ ನಿರ್ದೇಶಕ : ಲಿಯೋಸ್ ಕ್ಯಾರಾಕ್ಸ್, (ಆನೆಟ್)
ಅತ್ಯುತ್ತಮ ಚಿತ್ರಕಥೆ : ರ್ಯುಸುಕ್ ಹಮಗುಚಿ,( ಡ್ರೈವ್ ಮೈ ಕಾರ್)
ಕ್ಯಾಮರ್ ಡಿಓರ್ : ಮ್ಯೂರಿನಾ
ಶಾರ್ಟ್ ಫಿಲಂ ಪಾಮ್ ಡಿಓರ್ : ಟಿಯಾನ್ ಕ್ಸಿಯಾ ವು ಯಾ