alex Certify ತಿರುಪತಿ ತಿಮ್ಮಪ್ಪನಿಗೆ ಅನಾಮಿಕ ಭಕ್ತನಿಂದ ದುಬಾರಿ ಕಾಣಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿರುಪತಿ ತಿಮ್ಮಪ್ಪನಿಗೆ ಅನಾಮಿಕ ಭಕ್ತನಿಂದ ದುಬಾರಿ ಕಾಣಿಕೆ

ತಿರುಪತಿ : ಅನಾಮಿಕ ಭಕ್ತನೊಬ್ಬ ತಿಮ್ಮಪ್ಪನಿಗೆ ಭರ್ಜರಿ ಕಾಣಿಕೆ ನೀಡಿದ್ದಾರೆ. ದೇಶದ ಶ್ರೀಮಂತ ದೇವರಾಗಿರುವ ತಿಮ್ಮಪ್ಪನ ದರ್ಶನ ಪಡೆಯಲು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಶ್ರೀಮಂತ ದೇವರಿಗೆ ಶ್ರೀಮಂತ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದಾಗಿ ತಿಮ್ಮಪ್ಪನ ಹುಂಡಿ ಚಿನ್ನ, ಧಾನ್ಯಗಳಿಂದ ಯಾವಾಗಲೂ ತುಂಬಿ ತುಳುಕುತ್ತಿರುತ್ತದೆ. ಸದ್ಯ ಅನಾಮಿಕ ಭಕ್ತನೊಬ್ಬ 3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ತಿಮ್ಮಪ್ಪನಿಗೆ ಅರ್ಪಿಸಿದ್ದಾನೆ.

ಈ ಭಕ್ತ, 3 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರ ಹಾಗೂ ಚಿನ್ನದ ಹಸ್ತ ಅರ್ಪಿಸಿದ್ದಾರೆ. ಆದರೆ, ಇದನ್ನು ಅರ್ಪಿಸಿರುವ ಭಕ್ತನ ಹೆಸರು ಮಾತ್ರ ಬಹಿರಂಗವಾಗಿಲ್ಲ. ಭಕ್ತಿಯಿಂದ ನೀಡಿದ್ದೇನೆ. ನನ್ನ ಹೆಸರು ಬಹಿರಂಗವಾಗುವುದು ಬೇಡ ಎಂದು ಅವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಈ ಕಾಣಿಕೆ ಬರೊಬ್ಬರಿ 5.3 ಕೆಜಿಯದ್ದಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...