alex Certify ತಿರುಪತಿ ತಿಮ್ಮಪ್ಪನ ಭಕ್ತರಿಗೆ ಶಾಕ್: ರೂಂ ಬಾಡಿಗೆ ಭಾರಿ ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಶಾಕ್: ರೂಂ ಬಾಡಿಗೆ ಭಾರಿ ಹೆಚ್ಚಳ

ತಿರುಪತಿ: ತಿರುಪತಿ ತಿರುಮಲ ವೆಂಕಟೇಶ್ವರನ ದರ್ಶನಕ್ಕೆ ಬರುವ ಭಕ್ತರ ವಸತಿ ಕೊಠಡಿಗಳ ಬಾಡಿಗೆ ದರವನ್ನು ಭಾರಿ ಹೆಚ್ಚಳ ಮಾಡಲಾಗಿದೆ.

ಕೆಲವು ಕೊಠಡಿಗಳಿಗೆ ದುಪ್ಪಟ್ಟು ದರ ವಿಧಿಸಲಾಗಿದೆ. ತಿರುಮಲದ ಪಾಚಜನ್ಯಂ, ಕೌಸ್ತುಭಂ, ವಕುಳಾಮಾತಾ, ನಂದಕಂ ಅತಿಥಿ ಗೃಹಗಳ ಕೊಠಡಿಗಳ ಬಾಡಿಗೆ ದರವನ್ನು 600 ರೂ. ನಿಂದ 1 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ.

ನಾರಾಯಣಗಿರಿ ವಿಶ್ರಾಂತಿ ಗೃಹದ ಒಂದು, ಎರಡು, ಮೂರನೇ ಬ್ಲಾಕ್ ನ ಬಾಡಿಗೆಯನ್ನು 1500 ರೂ.ನಿಂದ 1700 ರೂ.ಗೆ ಏರಿಕೆ ಮಾಡಲಾಗಿದೆ. ವಿಶ್ರಾಂತಿ ಗೃಹ 4ರ ಬಾಡಿಗೆ 750 ರೂ.ನಿಂದ 1700 ರೂ.ಗೆ ಏರಿಕೆ ಮಾಡಲಾಗಿದ್ದು, ಕಾರ್ನರ್ ಸೂಟ್ ಗಳ ದರ ಜಿಎಸ್‌ಟಿ ಸೇರಿ 2,200 ರೂ.ಗಳಷ್ಟು ಆಗಿದೆ. ವಿಶೇಷ ಕೊಠಡಿ ಬಾಡಿಗೆ ದರ 2800 ರೂಪಾಯಿಗೆ ಏರಿಕೆ ಮಾಡಲಾಗಿದೆ. ಬಾಡಿಗೆ ಜೊತೆಗೆ ಬಾಡಿಗೆ ಮೊತ್ತದಷ್ಟೇ ಠೇವಣಿಯನ್ನು ಭಕ್ತರು ಪಾವತಿಸಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...