alex Certify ಬಾಲ ಅಲ್ಲಾಡಿಸುತ್ತಾ ಸಿಂಹವನ್ನು ನೋಡುತ್ತಾ ನಿಂತ ಸಾಕುನಾಯಿ: ಎದೆ ಝಲ್ಲೆನ್ನಿಸುವ ದೃಶ್ಯ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲ ಅಲ್ಲಾಡಿಸುತ್ತಾ ಸಿಂಹವನ್ನು ನೋಡುತ್ತಾ ನಿಂತ ಸಾಕುನಾಯಿ: ಎದೆ ಝಲ್ಲೆನ್ನಿಸುವ ದೃಶ್ಯ ವೈರಲ್

Tiny dog stares down mountain lion. Chilling viral video shows what happened  next - Trending News Newsಅಂತರ್ಜಾಲದಲ್ಲಿ ವೈರಲ್ ಆಗಿರುವ ವಿಡಿಯೋವೊಂದಲ್ಲಿ  ಮಹಿಳೆಯೊಬ್ಬರು ತನ್ನ ಮುದ್ದಿನ ನಾಯಿಯನ್ನು ಪರ್ವತ ಸಿಂಹ ನೋಡುತ್ತಿರುವ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಅಮೆರಿಕದ ಕೊಲೊರಾಡೋದ ಗ್ರ್ಯಾಂಡ್ ಲೇಕ್‌ನಲ್ಲಿ ಈ ಘಟನೆ ನಡೆದಿದೆ. ಸಾರಾ ಬೋಲೆ ಎಂಬ ಮಹಿಳೆ ಡಿಸೆಂಬರ್ 3ರಂದು ಈ ಎದೆ ಝಲ್ಲೆನ್ನಿಸುವಂತಹ ವಿಡಿಯೋವನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಅಂದಿನಿಂದ ಈ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ, ಮನೆಯಿಂದ ಹೊರಗಡೆ ನಿಂತಿದ್ದ ದೊಡ್ಡ ಪರ್ವತ ಸಿಂಹವೊಂದು ಒಳಾಂಗಣದಲ್ಲಿ ಸಾಕುನಾಯಿಯನ್ನು ದಿಟ್ಟಿಸಿದೆ. ಕೆಲವು ಸೆಕೆಂಡುಗಳ ನಂತರ ಹತ್ತಿರ ಬಂದ ಸಿಂಹವು ನಾಯಿಯನ್ನು ತಲುಪಲು ಪ್ರಯತ್ನಿಸಿದೆ. ಗಾಜಿನ ಬಾಗಿಲು ಆಗಿರುವುದರಿಂದ ಸಿಂಹಕ್ಕೆ ನಾಯಿಯ ಇರುವಿಕೆ ಸ್ಪಷ್ಟವಾಗಿ ಕಾಣಿಸಿದೆ. ಆದರೆ, ಒಳಗೆ ಬರಲಷ್ಟೇ ಸಾಧ್ಯವಾಗಿಲ್ಲ.

ವಿಡಿಯೋ ಚಿತ್ರೀಕರಿಸುತ್ತಿದ್ದ ಸಾರಾ ತನ್ನ ನಾಯಿಯನ್ನು ಹಿಂದಕ್ಕೆ ಬರುವಂತೆ ಕೂಗಿದ್ದಾಳೆ. ಆದರೆ, ನಾಯಿ ಮಾತ್ರ ಸ್ವಲ್ಪವೂ ಕದಲದೇ ತದೇಕಚಿತ್ತದಿಂದ ಸಿಂಹವನ್ನು ನೋಡುತ್ತಾ, ಬಾಲ ಅಲ್ಲಾಡಿಸುತ್ತಾ ನಿಂತಿದೆ. ಒಳಗೆ ಬರುವ ಎಲ್ಲಾ ಪ್ರಯತ್ನ ವಿಫಲವಾದ್ದರಿಂದ, ಏನೂ ಪ್ರಯೋಜನವಿಲ್ಲ ಎಂದು ಅರಿತ ಸಿಂಹ ಅಲ್ಲಿಂದ ಹೊರಟು ಹೋಗಿದೆ. ಈ ವೇಳೆ ಶ್ವಾನ ಜೋರಾಗಿ ಬೊಗಳಿದೆ. ಬೊಗಳುತ್ತಿದ್ದ ತನ್ನ ಮುದ್ದಿನ ನಾಯಿಯನ್ನು ಮಾಲಕಿ ಸಾರಾ ಶಾಂತಗೊಳಿಸಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...