alex Certify ಕರೀನಾ, ಹೃತಿಕ್‍‍ ರ ‘ಬೋಲೆ ಚೂಡಿಯನ್‍’ಗೆ ಹೆಜ್ಜೆ ಹಾಕಿದ ಸಿಂಗಾಪೂರದ ಯುವಕರು: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರೀನಾ, ಹೃತಿಕ್‍‍ ರ ‘ಬೋಲೆ ಚೂಡಿಯನ್‍’ಗೆ ಹೆಜ್ಜೆ ಹಾಕಿದ ಸಿಂಗಾಪೂರದ ಯುವಕರು: ವಿಡಿಯೋ ವೈರಲ್

TikTok Users Hilariously Imitate Kareena Kapoors Bole Chudiyan Steps, Win  The Internet | Watchಬಾಲಿವುಡ್ ಹಾಡುಗಳು ಭಾರತದಲ್ಲಿ ಮಾತ್ರ ಜನಪ್ರಿಯವಾಗಿಲ್ಲ, ಇತರೆ ದೇಶಗಳಲ್ಲೂ ಕೂಡ ಹಲವಾರು ಜನರು ಭಾರತದ ಸಿನಿಮಾಗಳನ್ನು ವೀಕ್ಷಿಸುತ್ತಾರೆ. ಇದರಲ್ಲಿ ಕಭಿ ಖುಷಿ ಕಭಿ ಗಮ್ ಅಪ್ರತಿಮ ಚಲನಚಿತ್ರಗಳಲ್ಲೊಂದಾಗಿದೆ. ಅದರ ಹಾಡುಗಳು ಮತ್ತು ಸಂಭಾಷಣೆಗಳು ಬಿಡುಗಡೆಯಾದ ಸುಮಾರು 20 ವರ್ಷಗಳ ನಂತರವೂ ಜನಪ್ರಿಯವಾಗಿವೆ.

ಇದೀಗ ಈ ಚಿತ್ರದ ಹಾಡಿನ ದೃಶ್ಯವನ್ನು ಸಿಂಗಾಪುರಾದ ಟಿಕ್ ಟಾಕರ್ ಗಳ ಗುಂಪೊಂದು ಮರುಸೃಷ್ಟಿಸಿದೆ. ಬೋಲೆ ಚುಡಿಯನ್ ಹಾಡಿಗೆ ಯುವಕರ ಗುಂಪು, ಸಿನಿಮಾದಲ್ಲಿರುವಂತೆಯೇ ಸ್ಟೆಪ್ಸ್ ಹಾಕಿದ್ದಾರೆ. ಕರೀನಾ ಪಾತ್ರವನ್ನೂ ಕೂಡ ಯುವಕನೇ ಮಾಡಿದ್ದು, ಬೆಬೋ ರೀತಿಯೇ ನೃತ್ಯ ಮಾಡಿರುವುದು ಎಲ್ಲರಲ್ಲೂ ಆಶ್ಚರ್ಯ ತಂದಿದೆ. ಕರೀನಾ ಮಾತ್ರವಲ್ಲ, ಹೃತಿಕ್ ರೋಷನ್ ಪಾತ್ರಧಾರಿ ಹಾಗೂ ಇನ್ನಿತರರು ಕೂಡ ಹಾಡಿನ ದೃಶ್ಯದಲ್ಲಿರುವಂತೆಯೇ ಡ್ಯಾನ್ಸ್ ಮಾಡಿದ್ದಲ್ಲದೆ, ಅದೇ ರೀತಿ ಹಾವ-ಭಾವಗಳನ್ನೂ ನೀಡಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ನಗು ತಂದಿದೆ.

ಕ್ರಿಸ್ಟೋಫರ್ ಕೌಲಂಬಸ್ ಎಂಬ ಬಳಕೆದಾರರು ಈ ವಿಡಿಯೊವನ್ನು ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಟಿಕ್‌ಟಾಕರ್‌ಗಳ ಸೃಜನಶೀಲತೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.

— christopher koulumbus (@shivillex) November 5, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...