
ಹುಲಿಗಳು ತಮ್ಮ ಆವಾಸ ಸ್ಥಾನದಲ್ಲಿ ಬೇಟೆಯಾಡುವುದೋ ಅಥವಾ ವಿಶ್ರಾಂತಿ ಪಡೆಯುವುದನ್ನು ಸಾಮಾನ್ಯವಾಗಿ ವೀಕ್ಷಿಸಲು ಅವಕಾಶ ಸಿಗಲಿದೆ, ಅದರ ಫೋಟೋ ವಿಡಿಯೋ ಸಹ ಸಿಗಲಿದೆ. ಆದರೆ ಇಲ್ಲೊಂದು ಅಪರೂಪದ ರಣರೋಚಕ ವಿಡಿಯೋ ಗಮನ ಸೆಳೆಯುತ್ತದೆ.
ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊವನ್ನು ಪಶ್ಚಿಮ ಬಂಗಾಳದ ಸುಂದರಬನ್ಸ್ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ. ಈ ವಿಡಿಯೋ ಹಳೆಯದೇ ಆದರೂ ನೆಟ್ಟಿಗರನ್ನು ವಿಸ್ಮಗೊಳಿಸುತ್ತಿದೆ.
ಗಗನಸಖಿಯ ಕಣ್ಣೀರಿನ ವಿದಾಯ; ನೆಟ್ಟಿಗರೂ ಭಾವುಕ
ಯಾವುದೋ ಸಂದರ್ಭದಲ್ಲಿ ಹಿಡಿಯಲಾದ ಹುಲಿಯನ್ನು ಕಾಡಿಗೆ ವಾಪಾಸು ಬಿಡುವ ಹಿನ್ನೆಲೆಯಲ್ಲಿ ಬೋಟ್‌ನಲ್ಲಿ ಕಾಡಿನ ಅಂಚಿಗೆ ತಂದು ಅಲ್ಲಿ ಬಿಡುಗಡೆ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಹುಲಿಯ ಅದ್ಭುತ ಜಿಗಿತವನ್ನು ಪದಗಳಲ್ಲಿ ವಿವರಿಸಲು ಸಾಧ್ಯವೇ ಇಲ್ಲ.
ಬೋಟ್‌ನಿಂದ ಚಂಗನೆ ಜಿಗಿಯುವ ಹುಲಿ ನಂತರ ಈಜಿಕೊಂಡು ಕೆಲದೂರ ಸಾಗಿ ಬಳಿಕ ಕಾಡಿನಲ್ಲಿ ಮರೆಯಾಗುತ್ತದೆ.
ಹುಲಿ ಬಿಡುಗಡೆಯ ವೀಡಿಯೊ 50 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ. ಈ ವಿಡಿಯೋ ನೋಡಿ ನೆಟ್ಡಿಗರು ಬೆರಗಾದರು.