alex Certify ಟೈಗರ್ ಶ್ರಾಫ್ ಅನುಕರಣೆ ಮಾಡಿ ಮನೆ ಮಾತಾದ ಮಿಮಿಕ್ರಿ ಕಲಾವಿದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೈಗರ್ ಶ್ರಾಫ್ ಅನುಕರಣೆ ಮಾಡಿ ಮನೆ ಮಾತಾದ ಮಿಮಿಕ್ರಿ ಕಲಾವಿದ

ಬಾಲಿವುಡ್ ನ ಖ್ಯಾತ ನಟ ಟೈಗರ್ ಶ್ರಾಫ್ ಅವರನ್ನು ಅನುಕರಣೆ ಮಾಡಿದ ಮಿಮಿಕ್ರಿ ಕಲಾವಿದ ದೀಪೇಂದ್ರ ಸಿಂಗ್ ರಾತ್ರೋರಾತ್ರಿ ಇಂಟರ್ನೆಟ್ ನಲ್ಲಿ ಪ್ರಖ್ಯಾತರಾಗಿದ್ದಾರೆ. ಹೀರೋಪಂತಿ ಚಿತ್ರದಲ್ಲಿ ಟೈಗರ್ ಶ್ರಾಫ್ ಅವರ “ಅರೇ ಚೋಟಿ ಬಚ್ಚಿ ಹೋ ಕ್ಯಾ?’’ ಡೈಲಾಗ್ ಮನೆ ಮಾತಾಗಿತ್ತು.

ಇದೀಗ ಈ ಡೈಲಾಗ್ ಮತ್ತಷ್ಟು ಪ್ರಚಾರ ಪಡೆದಿದೆ. ಇದಕ್ಕೆ ಕಾರಣ ದೀಪೇಂದ್ರ ಸಿಂಗ್ ಈ ಡೈಲಾಗ್ ಅನ್ನು ಶ್ರಾಫ್ ಧಾಟಿಯಲ್ಲೇ ಹೇಳುವ ಮೂಲಕ ಜನಪ್ರಿಯರಾಗಿದ್ದಾರೆ.

ಇದನ್ನು ಗಮನಿಸಿದ ಟೈಗರ್ ಶ್ರಾಫ್ ಅವರು ದೀಪೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ ಶುಭ ಕೋರಿರುವುದಷ್ಟೇ ಅಲ್ಲ, ಈ ಮಿಮಿಕ್ರಿ ಕಲಾವಿದನ ಜೊತೆಗೆ ರೀಲ್ ಅನ್ನೂ ಸಹ ಮಾಡಿದ್ದಾರೆ.

ಅಂತಿಮವಾಗಿ ಈ ರೀಲ್ ಗೆ “ಅರೇ ಚೋಟಿ ಬಚ್ಚಿ ಹೋ ಕ್ಯಾ?’’ ನಾವಿಬ್ಬರು ಎಂದು ಶೀರ್ಷಿಕೆ ನೀಡಿದ್ದಾರೆ. ಈ ರೀಲ್ ಗೆ ಅಸಂಖ್ಯಾತ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ದೀಪೇಂದ್ರ ಸಿಂಗ್ ಅವರ ಸಾಧನೆಗೆ ಶುಭಾಶಯಗಳನ್ನು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...