ಪಂಜರದಿಂದ ವಾಸಸ್ಥಳಕ್ಕೆ ತೆರಳಿದ ಹುಲಿರಾಯ..! ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ 19-06-2021 10:04PM IST / No Comments / Posted In: Latest News, India, Live News ಬಿಹಾರದ ಪೂರ್ವ ಚಂಪರಣ್ ಜಿಲ್ಲೆಯ ಕೇಂದ್ರ ಕಚೇರಿ ಇರುವ ಮೋತಿಹರಿ ಎಂಬಲ್ಲಿ ಸೆರೆ ಹಿಡಿಯಲಾಗಿದ್ದ ಹುಲಿಯನ್ನ ಶುಕ್ರವಾರ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ. ಈ ವಿಡಿಯೋವನ್ನ ಐಎಫ್ಎಸ್ ಅಧಿಕಾರಿ ರಮೇಶ್ ಪಾಂಡೆ ಶೇರ್ ಮಾಡಿದ್ದು ವೈರಲ್ ಆಗಿದೆ. ಮೋತಿಹರಿಯಲ್ಲಿ ಸೆರೆಗೆ ಸಿಕ್ಕಿದ್ದ ಹುಲಿಯನ್ನ ಪಂಜರದಲ್ಲಿ ಇಡಲಾಗಿತ್ತು. ಬಳಿಕ ಇದನ್ನ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಟ್ರಕ್ನಲ್ಲಿ ತರಲಾಯ್ತು. ಹುಲಿ ಸಂರಕ್ಷಿತ ಪ್ರದೇಶಕ್ಕೆ ಬರ್ತಾ ಇದ್ದಂತೆ ಹುಲಿಯು ಪಂಜರದಲ್ಲಿ ಹೊರಬರಲು ಕಾತುರನಾಗಿದ್ದಂತೆ ಕಂಡು ಬಂತು. ಪಂಜರದ ಬಾಗಿಲನ್ನ ತೆರೆಯುತ್ತಿದ್ದಂತೆಯೇ ಅಲ್ಲಿಂದ ಜಿಗಿದ ಹುಲಿರಾಯ ಸಂರಕ್ಷಿತ ಪ್ರದೇಶದ ಕಡೆ ಓಡಿದೆ. ಮೋತಿಹರಿ ಎಂಬಲ್ಲಿ ರಕ್ಷಿಸಲಾಗಿದ್ದ ಹುಲಿಯನ್ನ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿಡುಗಡೆ ಮಾಡಲಾಗಿದೆ. ಹುಲಿ ತನ್ನ ವಾಸಸ್ಥಾನಕ್ಕೆ ಮರಳೋದನ್ನ ನೋಡೋದಕ್ಕಿಂತ ಉತ್ತಮವಾದದ್ದು ಇನ್ನೇನಿದೆ ಎಂದು ರಮೇಶ್ ಪಾಂಡೆ ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. A tiger got rescued from Motihari and was released in Valmiki Tiger Reserve, West Champaran, Bihar. What else could be better than to see a tiger leaping back into its habitat. #TigerRescue pic.twitter.com/1Zfswco3Up — Ramesh Pandey (@rameshpandeyifs) June 18, 2021