ನೀವು ಪಡ್ಡು ಪ್ರಿಯರಾಗಿದ್ದರೆ ಪಡ್ಡು ಅನ್ನು ಹಲವು ರುಚಿಯಲ್ಲಿ ಮಾಡಿ ಸವಿಯಬಹುದು. ಬೆಳಗ್ಗಿನ ಬ್ರೇಕ್ ಫಾಸ್ಟ್‌ಗೆ ಖಾರ ಪಡ್ಡು ಸವಿಯಲು ಮಜಾವಾಗಿರುತ್ತದೆ. ಹಾಗಿದ್ದರೆ ಖಾರ ಪಡ್ಡು ಅನ್ನು ರುಚಿಕರವಾಗಿ ಮಾಡುವ ರೆಸಿಪಿ ನೀಡಲಾಗಿದೆ ನೋಡಿ.
ಬೇಕಾಗುವ ಸಾಮಾಗ್ರಿಗಳು
ಅಕ್ಕಿ 2 ಕಪ್
ಮೆಂತೆ 3/4 ಕಪ್
ಕರಿಬೇವು ಸ್ವಲ್ಪ
ಈರುಳ್ಳಿ 2 ಚಿಕ್ಕ
ಎಣ್ಣೆ 2 ಚಮಚ
ಉದ್ದಿನ ಬೇಳೆ 1/2 ಕಪ್
ಹಸಿ ಮೆಣಸು 4
ಇಂಗು ಚಿಟಿಕೆಯಷ್ಟು
ಶುಂಠಿ 2 ಚಮಚ
ಸಾಸಿವೆ 1/2 ಚಮಚ
ಮಾಡುವ ವಿಧಾನ
ಅಕ್ಕಿ, ಉದ್ದಿನ ಬೇಳೆ, ಮೆಂತೆ ಇವುಗಳನ್ನು 6 ಗಂಟೆ ನೆನೆ ಹಾಕಿ. ನಂತರ ನೀರು ಸೋಸಿ ಎಲ್ಲವನ್ನು ಜಾರ್‌ನಲ್ಲಿ ಹಾಕಿ ರುಬ್ಬಿ. ನಂತರ ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ 8 ಗಂಟೆ ಇಡಿ.
ಹಿಟ್ಟು ಉದುಗು ಬಂದ ಮೇಲೆ, ಪ್ಯಾನ್ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಗೂ ಉದ್ದಿನ ಬೇಳೆ ಹಾಕಿ, ನಂತರ ಕರಿಬೇವು, ಇಂಗು, ಶುಂಠಿ, ಹಸಿ ಮೆಣಸು, ಈರುಳ್ಳಿ, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ. ಈರುಳ್ಳಿ ಕಂದು ಬಣ್ಣಕ್ಕೆ ಬರುವಾಗ ಅದನ್ನು ಹಿಟ್ಟಿನ ಜೊತೆ ಮಿಕ್ಸ್ ಮಾಡಿ.
ಈಗ ಪಡ್ಡು ಪಾತ್ರೆಗೆ ಎಣ್ಣೆ ಸವರಿ ಹಿಟ್ಟನ್ನು ಹಾಕಿ, ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ, ನಂತರ ಮಗುಚಿ ಹಾಕಿ. ಈಗ ರೆಡಿಯಾದ ಬಿಸಿ ಬಿಸಿಯಾದ ಖಾರ ಪಡ್ಡು ಅನ್ನು ತೆಂಗಿನ ಕಾಯಿ ಚಟ್ನಿ ಅಥವಾ ತುಪ್ಪದ ಜೊತೆ ಸವಿಯಿರಿ.