
ಮೈಸೂರು: ಮೈಸೂರು ಜಿಲ್ಲೆ ಕೆಆರ್ ನಗರ ತಾಲೂಕಿನ ವಿವಿಧೆಡೆ ಬಿರುಗಾಳಿ, ಆಲಿಕಲ್ಲು ಸಹಿತ ಮಳೆಯಾಗಿದೆ.
ಹೆಬ್ಬಾಳು, ಬ್ಯಾಡರಹಳ್ಳಿ, ಕಗ್ಗರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಮಳೆಯಾಗಿದೆ. ಬಿರುಗಾಳಿ ಸಹಿತ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಆಲಿಕಲ್ಲು ಸಹಿತ ದಿಢೀರ್ ಮಳೆಯಾಗಿದ್ದರಿಂದ ಜನ ಪರದಾಟ ನಡೆಸಿದ್ದಾರೆ.
ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ದ್ವಿಚಕ್ರ ವಾಹನ ಸವಾರರು ಪರದಾಡಿದ್ದಾರೆ. ಪಾತ್ರೆ, ಬಕೆಟ್ ಗಳಲ್ಲಿ ಸಾರ್ವಜನಿಕರು ಆಲಿಕಲ್ಲು ಸಂಗ್ರಹಿಸಿದ್ದಾರೆ.