
ಇದೇ 20 ವರ್ಷಗಳ ಹಿಂದೆ ಇದೇ ದಿನದಂದು ಪ್ರಧಾನಿ ಮೋದಿ ಮೊದಲ ಬಾರಿಗೆ ಗುಜರಾತ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. 2001 ರಿಂದ 2014ರವರೆಗೆ ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ.
ಮಹಿಳೆಯರು ಪಿಜ್ಜಾ ತಿನ್ನುವುದನ್ನು ಟಿವಿಯಲ್ಲಿ ತೋರಿಸುವಂತಿಲ್ಲ..! ಈ ದೇಶದಲ್ಲಿ ಜಾರಿಯಾಗಿದೆ ವಿಚಿತ್ರ ನಿಯಮ
2014ರ ಮೇ 26ರಂದು ಮೊದಲ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಎರಡನೇ ಬಾರಿಗೆ 2019ರ ಮೇ ತಿಂಗಳಲ್ಲಿ ಪದಗ್ರಹಣ ಮಾಡಿದ್ದರು. ಸ್ವಾತಂತ್ರ್ಯ ನಂತರ ಜನಿಸಿದ ದೇಶದ ಮೊದಲ ಪ್ರಧಾನಿ ಎಂಬ ಕೀರ್ತಿ ಕೂಡ ಮೋದಿಗೆ ಸಲ್ಲುತ್ತದೆ.
ಧಾರಾವಾಹಿ ನೋಡಲು ಬಿಡದ ಮಗಳಿಗೆ ತಾಯಿ ಬೈದ ಪರಿ ಕಂಡು ನೆಟ್ಟಿಗರು ಫಿದಾ..!
ಅಧಿಕಾರ ರಾಜಕಾರಣಕ್ಕೆ 2 ದಶಕಗಳು ಪೂರೈಸಿದ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ 2001ರ ಅಕ್ಟೋಬರ್ 7ರಂದು ಗುಜರಾತ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೇಶುಭಾಯ್ ಪಟೇಲ್ ರಾಜೀನಾಮೆಯ ಬಳಿಕ ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿ ಆಯ್ಕೆಯಾಗಿದ್ದರು. 2001ರಿಂದ 2014ರವರೆಗೆ ಸಿಎಂ ಆಗಿದ್ದ ನರೇಂದ್ರ ಮೋದಿ ಈ ಮೂಲಕ ಗುಜರಾತ್ನಲ್ಲಿ ದೀರ್ಘಾವದಿಯ ಸಿಎಂ ಎಂಬ ಕೀರ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ.
ಸರ್ಕಾರದ ಮುಖ್ಯಸ್ಥನಾಗಿ 2 ದಶಕಗಳನ್ನು ಪೂರೈಸಿದ ಸಂದರ್ಭದಲ್ಲಿ ಉತ್ತರಾಖಂಡ್ನ ರಿಷಿಕೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ನಾನು ಇದನ್ನು ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.
ಹೊಸ ವಾಹನ ಖರೀದಿ ಮಾಡುವವರಿಗೊಂದು ಗುಡ್ ನ್ಯೂಸ್…..! ಇದ್ರಲ್ಲಿ ಸಿಗ್ತಿದೆ ಶೇ.25ರಷ್ಟು ರಿಯಾಯಿತಿ
ನಾನು ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸುತ್ತೇನೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ನನಗೆ ಜನರ ಸೇವೆ ಮಾಡಲು ಹೊಸ ಜವಾಬ್ದಾರಿ ಸಿಕ್ಕಿದೆ. ಜನರ ಸೇವೆ ಮಾಡುವ ಅವಕಾಶ ನನಗೆ 20 ವರ್ಷಗಳಿಂದ ಸಿಕ್ಕಿದೆ. ಆದರೆ 20 ವರ್ಷಗಳ ಹಿಂದೆ ಇದೇ ನನಗೆ ಹೊಸ ಜವಾಬ್ದಾರಿಯೊಂದು ಹೆಗಲೇರಿದ್ದ ಕ್ಷಣವಾಗಿತ್ತು ಎಂದು ಹೇಳಿದ್ದಾರೆ.