alex Certify ಒಂದೇ ದಿನಕ್ಕೆ 50 ಮಿಲಿಯನ್​ಗೂ ಅಧಿಕ ಬಳಕೆದಾರರನ್ನು ಸಂಪಾದಿಸಿದ ಥ್ರೆಡ್​ ಆಪ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ದಿನಕ್ಕೆ 50 ಮಿಲಿಯನ್​ಗೂ ಅಧಿಕ ಬಳಕೆದಾರರನ್ನು ಸಂಪಾದಿಸಿದ ಥ್ರೆಡ್​ ಆಪ್​​

ಟ್ವಿಟರ್​ಗೆ ಠಕ್ಕರ್​ ನೀಡಲು ಗುರುವಾರದಿಂದ ಕಾರ್ಯಾರಂಭಗೊಂಡಿರುವ ಥ್ರೆಡ್​ ಅಪ್ಲಿಕೇಶನ್​ ಈಗಾಗಲೇ 50 ಮಿಲಿಯನ್​ಗೂ ಅಧಿಕ ಬಳಕೆದಾರರನ್ನು ಸಂಪಾದಿಸಿದೆ. ಅಪ್ಲಿಕೇಶನ್​ ಲೋಕಾರ್ಪಣೆಗೊಂಡು ಕೇವಲ 24 ಗಂಟೆಗಳಲ್ಲಿ ಭಾರೀ ಪ್ರತಿಕ್ರಿಯೆ ಸಂಪಾದಿಸಿದೆ. ಮೆಟಾ ಮಾಲೀಕತ್ವದ ಜನಪ್ರಿಯ ಫೋಟೋ ಹಾಗೂ ವಿಡಿಯೋ ಶೇರಿಂಗ್​ ಆ್ಯಪ್ ಆಗಿರುವ ಇನ್​ಸ್ಟಾಗ್ರಾಂಗೆ ನಿಕಟ ಸಂಬಂಧ ಹೊಂದಿದೆ.

ಇನ್ನು ಥ್ರೆಡ್​ನ ಜನಪ್ರಿಯತೆ ಟ್ವಿಟರ್​ಗೆ ದೊಡ್ಡ ಪ್ರಮಾಣದಲ್ಲಿ ಏಟನ್ನು ನೀಡಿದೆ. ದಿ ವರ್ಜ್​್ನ ಅಲೆಕ್ಸ್​ ಹೀತ್​ ತನ್ನ ಥ್ರೆಡ್​ ಪೋಸ್ಟ್​​ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು ಈಗಾಗಲೇ 48 ಮಿಲಿಯನ್​ ಬಳಕೆದಾರರು ಥ್ರೆಡ್​ ಆ್ಯಪ್​ ಬಳಸಲು ಆರಂಭಿಸಿದ್ದಾರೆ ಎಂದು ಹೇಳಿದ್ದಾರೆ. ಇನ್​ಸ್ಟಾಗ್ರಾಂ ಬಳಕೆದಾರರು ಥ್ರೆಡ್​ಗೆ ಸೈನಪ್​ ಮಾಡಿದಾಗ ಅವರ ಇನ್​ಸ್ಟಾಗ್ರಾಂ ಖಾತೆಯ ಬಯೋ ವಿಭಾಗದಲ್ಲಿ ಥ್ರೆಡ್​ನ ಸರಣಿ ಸಂಖ್ಯೆಯನ್ನು ಪ್ರದರ್ಶಿಸುತ್ತದೆ.

ಇನ್ನು ಒಂದೇ ದಿನಕ್ಕೆ ಥ್ರೆಡ್​ ಅಪ್ಲಿಕೇಶನ್​​ ಅನೇಕ ದೇಶಗಳಲ್ಲಿ ಜನಮನ್ನಣೆ ಗಳಿಸಿದೆ. ಭಾರತದಲ್ಲಿ ಐಓಎಸ್​ ನಲ್ಲಿ ಉಚಿತ ಆ್ಯಪ್​​ಗಳ ಸಾಲಿನಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಇನ್ನು ಚೀನಾದ ಆಪ್​ಸ್ಟೋರ್​ನಲ್ಲಿ ಥ್ರೆಡ್​ ಮೂರನೇ ಸ್ಥಾನ ಪಡೆದುಕೊಂಡಿದೆ. ಅಲ್ಲಿ ಪ್ರಸ್ತುತ ಮೆಟಾದ ಇತರೆ ಅಪ್ಲಿಕೇಶನ್​ಗಳನ್ನು ನಿರ್ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...