ಟ್ವಿಟರ್ಗೆ ಠಕ್ಕರ್ ನೀಡಲು ಗುರುವಾರದಿಂದ ಕಾರ್ಯಾರಂಭಗೊಂಡಿರುವ ಥ್ರೆಡ್ ಅಪ್ಲಿಕೇಶನ್ ಈಗಾಗಲೇ 50 ಮಿಲಿಯನ್ಗೂ ಅಧಿಕ ಬಳಕೆದಾರರನ್ನು ಸಂಪಾದಿಸಿದೆ. ಅಪ್ಲಿಕೇಶನ್ ಲೋಕಾರ್ಪಣೆಗೊಂಡು ಕೇವಲ 24 ಗಂಟೆಗಳಲ್ಲಿ ಭಾರೀ ಪ್ರತಿಕ್ರಿಯೆ ಸಂಪಾದಿಸಿದೆ. ಮೆಟಾ ಮಾಲೀಕತ್ವದ ಜನಪ್ರಿಯ ಫೋಟೋ ಹಾಗೂ ವಿಡಿಯೋ ಶೇರಿಂಗ್ ಆ್ಯಪ್ ಆಗಿರುವ ಇನ್ಸ್ಟಾಗ್ರಾಂಗೆ ನಿಕಟ ಸಂಬಂಧ ಹೊಂದಿದೆ.
ಇನ್ನು ಥ್ರೆಡ್ನ ಜನಪ್ರಿಯತೆ ಟ್ವಿಟರ್ಗೆ ದೊಡ್ಡ ಪ್ರಮಾಣದಲ್ಲಿ ಏಟನ್ನು ನೀಡಿದೆ. ದಿ ವರ್ಜ್್ನ ಅಲೆಕ್ಸ್ ಹೀತ್ ತನ್ನ ಥ್ರೆಡ್ ಪೋಸ್ಟ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು ಈಗಾಗಲೇ 48 ಮಿಲಿಯನ್ ಬಳಕೆದಾರರು ಥ್ರೆಡ್ ಆ್ಯಪ್ ಬಳಸಲು ಆರಂಭಿಸಿದ್ದಾರೆ ಎಂದು ಹೇಳಿದ್ದಾರೆ. ಇನ್ಸ್ಟಾಗ್ರಾಂ ಬಳಕೆದಾರರು ಥ್ರೆಡ್ಗೆ ಸೈನಪ್ ಮಾಡಿದಾಗ ಅವರ ಇನ್ಸ್ಟಾಗ್ರಾಂ ಖಾತೆಯ ಬಯೋ ವಿಭಾಗದಲ್ಲಿ ಥ್ರೆಡ್ನ ಸರಣಿ ಸಂಖ್ಯೆಯನ್ನು ಪ್ರದರ್ಶಿಸುತ್ತದೆ.
ಇನ್ನು ಒಂದೇ ದಿನಕ್ಕೆ ಥ್ರೆಡ್ ಅಪ್ಲಿಕೇಶನ್ ಅನೇಕ ದೇಶಗಳಲ್ಲಿ ಜನಮನ್ನಣೆ ಗಳಿಸಿದೆ. ಭಾರತದಲ್ಲಿ ಐಓಎಸ್ ನಲ್ಲಿ ಉಚಿತ ಆ್ಯಪ್ಗಳ ಸಾಲಿನಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಇನ್ನು ಚೀನಾದ ಆಪ್ಸ್ಟೋರ್ನಲ್ಲಿ ಥ್ರೆಡ್ ಮೂರನೇ ಸ್ಥಾನ ಪಡೆದುಕೊಂಡಿದೆ. ಅಲ್ಲಿ ಪ್ರಸ್ತುತ ಮೆಟಾದ ಇತರೆ ಅಪ್ಲಿಕೇಶನ್ಗಳನ್ನು ನಿರ್ಬಂಧಿಸಲಾಗಿದೆ.