alex Certify ಡೆಲಿವರಿ ಅಪ್ಲಿಕೇಶನ್​ ದೋಷ: ಉಚಿತವಾಗಿ ಫುಡ್​, ಡ್ರಿಂಕ್ಸ್​ ಆರ್ಡರ್​ ಮಾಡಲು ಮುಗಿಬಿದ್ದ ಗ್ರಾಹಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೆಲಿವರಿ ಅಪ್ಲಿಕೇಶನ್​ ದೋಷ: ಉಚಿತವಾಗಿ ಫುಡ್​, ಡ್ರಿಂಕ್ಸ್​ ಆರ್ಡರ್​ ಮಾಡಲು ಮುಗಿಬಿದ್ದ ಗ್ರಾಹಕರು

ಮಹಾನಗರ ಪ್ರದೇಶದಲ್ಲಿ ಫುಡ್​ ಡೆಲಿವರಿ ಆ್ಯಪ್​ ಬಳಕೆ ಹೆಚ್ಚಾಗುತ್ತಲೇ ಇದೆ. ಹತ್ತಾರು ಆ್ಯಪ್​ಗಳಿದ್ದು, ಒಂದಲ್ಲಾ ಒಂದು ಆಫರ್‌ಗಳನ್ನು ನೀಡುತ್ತಿರುತ್ತವೆ. ಆಫರ್​ಗಳನ್ನು ಹುಡುಕುವ ಗ್ರಾಹಕರೂ ಹೆಚ್ಚಿದ್ದಾರೆ. ಆದರೆ ಇಲ್ಲೊಂದು ಪ್ರಸಂಗದಲ್ಲಿ ಫುಡ್​ ಡೆಲಿವರಿ ಆ್ಯಪ್​ನಲ್ಲಿ ಸಾವಿರಾರು ಮಂದಿ ಗ್ರಾಹಕರು ಉಚಿತ ಆಫರ್​ ಪಡೆದಿದ್ದಾರೆ. ಅದು ಹೇಗೆಂದು ಯೋಚಿಸುತ್ತಿದ್ದೀರಾ, ಈ ಸ್ವಾರಸ್ಯಕರ ಸುದ್ದಿ ಓದಿ.

ಯುಎಸ್​ನಲ್ಲಿ ಡೋರ್​ ಡ್ಯಾಶ್​ ಎಂಬ ಫುಡ್​ ಡೆಲಿವರಿ ಆ್ಯಪ್​ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ನೂರಾರು ಜನರು ಒಂದು ಪೈಸೆ ಪಾವತಿಸದೆ ಆರ್ಡರ್​ ಮಾಡಲು ಕಾರಣವಾಯಿತು.

ಡೋರ್​ಡ್ಯಾಶ್​ ಸಮಸ್ಯೆ ವಿಚಾರ ಟ್ವಿಟ್ಟರ್​ನಲ್ಲಿ ವೈರಲ್​ ಆಗಿದ್ದು, ಹೆಚ್ಚು ಜನರ ಗಮನ ಸೆಳೆಯಿತು. ಗ್ರಾಹಕರು ಉಚಿತ ಆಹಾರವನ್ನು ಆರ್ಡರ್​ ಮಾಡುವ ಮೂಲಕ ಅವಕಾಶವನ್ನು ಎನ್​ಕ್ಯಾಶ್​ ಮಾಡಿಕೊಂಡರು. ಹೆಚ್ಚಿನ ಬೆಲೆಯ ಟಕಿಲಾ ಮತ್ತು ಗರ್ಭನಿರೋಧಕಗಳನ್ನು ಸಹ ಆರ್ಡರ್​ ಮಾಡಿದ್ದರು. ಡೋರ್​ಡ್ಯಾಶ್​ ಸಮಸ್ಯೆಯನ್ನು ಪರಿಹರಿಸುವ ಹೊತ್ತಿಗೆ ಪರಿಸ್ಥಿತಿ ಕೈಮೀರಿತ್ತು. ಸಾವಿರಾರು ಡಾಲರ್​ಗಳ ಮೊತ್ತದ ಆರ್ಡರ್​ಗಳ ಸ್ಕ್ರೀನ್​ಶಾಟ್​ಗಳನ್ನು ನೆಟ್ಟಿಗರು ಪೋಸ್ಟ್​ ಮಾಡಿದ್ದಾರೆ.

ಡೋರ್​ಡ್ಯಾಶ್​ ವಕ್ತಾರರು ಹೇಳುವ ಪ್ರಕಾರ, ದೋಷಪೂರಿತ ಆರ್ಡರ್​ಗಳನ್ನು ರದ್ದುಗೊಳಿಸುತ್ತಿದ್ದು, ವ್ಯಾಪಾರಿಗಳ ಜೊತೆ ಸಂಪರ್ಕದಲ್ಲಿದ್ದು, ನಷ್ಟ ಪರಿಹಾರಕ್ಕೆ ಪ್ರಯತ್ನ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...