alex Certify ದುರ್ಗೆ ಆಶೀರ್ವಾದ ಬಯಸುವವರು ನವರಾತ್ರಿಯಲ್ಲಿ ಮನೆಯಲ್ಲಿಡಿ ಈ ವಸ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುರ್ಗೆ ಆಶೀರ್ವಾದ ಬಯಸುವವರು ನವರಾತ್ರಿಯಲ್ಲಿ ಮನೆಯಲ್ಲಿಡಿ ಈ ವಸ್ತು

ನವರಾತ್ರಿಯಲ್ಲಿ ದುರ್ಗಾ ದೇವಿಯ 9 ರೂಪಗಳನ್ನು ಪ್ರತಿನಿತ್ಯ ಪೂಜಿಸಲಾಗುತ್ತದೆ. ಇಂದು ನವರಾತ್ರಿಯ ಮೂರನೇ ದಿನ,ದೇವಿ ಆರಾಧನೆಯಲ್ಲಿ ಭಕ್ತರು ನಿರತರಾಗಿದ್ದಾರೆ. ನವರಾತ್ರಿಯಲ್ಲಿ ಉಪವಾಸ ಸೇರಿದಂತೆ ಕೆಲವು ನಿಯಮಗಳ ಪಾಲನೆ ಮಾಡಲಾಗುತ್ತದೆ. ವಾಸ್ತು ಪ್ರಕಾರ ನವರಾತ್ರಿಯಲ್ಲಿ ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

ನವರಾತ್ರಿಯ ಸಂದರ್ಭದಲ್ಲಿ, ಪೂಜಾ ಸ್ಥಳದಲ್ಲಿ ಬೆಳ್ಳಿ ಅಥವಾ ಚಿನ್ನದ ನಾಣ್ಯವನ್ನು ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಪೂಜೆಯ ಸ್ಥಳದಲ್ಲಿ ಲಕ್ಷ್ಮಿ ಮತ್ತು ಗಣೇಶನ ಮೂರ್ತಿಯನ್ನು ಹೊಂದಿರುವ ನಾಣ್ಯವನ್ನು ಇಟ್ಟರೆ,ಮನೆಯಲ್ಲಿ ಸಂತೋಷ ಸದಾ ನೆಲೆಸಿರುತ್ತದೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.

ಲಕ್ಷ್ಮಿ, ಹಣಕಾಸಿನ ತೊಂದರೆಯಿಂದ ಮುಕ್ತಗೊಳಿಸುತ್ತಾಳೆ. ನವರಾತ್ರಿಯ ಶುಭ ಸಂದರ್ಭದಲ್ಲಿ ಲಕ್ಷ್ಮಿ ದೇವಿಯ ಮೂರ್ತಿಯನ್ನು ದೇವರ ಕೋಣೆಯಲ್ಲಿ ಇಡುವುದ್ರಿಂದ ವ್ಯಾಪಾರದಲ್ಲಿ ಪ್ರಗತಿಯಾಗುತ್ತದೆ. ವ್ಯಾಪಾರದಲ್ಲಿ ಲಾಭ, ಯಶಸ್ಸ ಲಭಿಸುತ್ತದೆ.

ಕಮಲದ ಹೂವು ಲಕ್ಷ್ಮಿಗೆ ಅತ್ಯಂತ ಪ್ರಿಯವಾದದ್ದು. ಹೀಗಾಗಿ ನವರಾತ್ರಿಯ ಸಂದರ್ಭದಲ್ಲಿ ಪೂಜೆಯ ಸ್ಥಳದಲ್ಲಿ ಕಮಲದ ಹೂವನ್ನು ಇಡಬೇಕು. ಕಮಲದ ಹೂವು ಲಭ್ಯವಿಲ್ಲದಿದ್ದರೆ, ಪೂಜೆಯ ಸ್ಥಳದಲ್ಲಿ ಕಮಲದ ಹೂವಿನ ಚಿತ್ರ ಅಥವಾ ಪೇಂಟಿಂಗ್  ಮಾಡಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...