ದೆಹಲಿ: ಯಾರೆಲ್ಲಾ ಕೊರೊನಾ ಲಸಿಕೆ ತೆಗೆದುಕೊಂಡಿದ್ದಾರೋ, ಅವರೆಲ್ಲಾ ಬಾಹುಬಲಿಯಾಗ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದಿನಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಿದೆ. ಈ ವೇಳೆ ಮಾತನಾಡಿದ ಪ್ರಧಾನಿ, ಲಸಿಕೆ ತೆಗೆದುಕೊಳ್ಳಲು ಜನರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಅವರು ಈ ಮಾತು ಹೇಳಿದ್ದಾರೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಈಗಾಗಲೇ 40 ಕೋಟಿ ಮಂದಿ ಬಾಹುಬಲಿಯಾಗಿದ್ದಾರೆ ಎಂದು ಹೇಳಿದ್ರು.
‘’ಅಸಂಖ್ಯಾತ ಜನರು ಲಸಿಕೆ ತೆಗೆದುಕೊಂಡಿರುವಿರಿ ಎಂದು ನಾನು ಭಾವಿಸಿದ್ದೇನೆ. ಆದರೆ, ದಯವಿಟ್ಟು ಕೋವಿಡ್ ನಿಯಮಾವಳಿಯನ್ನು ಜನರು ಅನುಸರಿಸಬೇಕು. ಈ ಲಸಿಕೆಯನ್ನು ‘ಕೈ’ಗೆ ಕೊಡುವುದರಿಂದ, ಯಾರೆಲ್ಲಾ ಲಸಿಕೆ ತೆಗೆದುಕೊಂಡಿರುವಿರೋ ಅವರೆಲ್ಲಾ ಬಾಹುಬಲಿಯಾಗ್ತಾರೆ. ಅಲ್ಲದೆ ಈಗಾಗಲೇ 40 ಕೋಟಿ ಜನರು ಬಾಹುಬಲಿಯಾಗಿದ್ದಾರೆ’’ ಎಂದು ಪ್ರಧಾನಿ ಹೇಳಿದ್ರು.
ಕೊರೊನಾ ಎರಡೂ ಡೋಸ್ ಲಸಿಕೆ ಪಡೆದವರಿಗೆ ಖುಷಿ ಸುದ್ದಿ
ಏಪ್ರಿಲ್-ಜೂನ್ ತಿಂಗಳ ಅವಧಿಯಲ್ಲಿ ಕೊರೋನಾ 2ನೇ ಅಲೆ ಮಾರಣಾಂತಿಕ ಅಬ್ಬರದ ಬಳಿಕ ಸಂಸತ್ತಿನ ಮೊದಲನೇ ಅಧಿವೇಶನ ಇದಾಗಿದೆ. ಕೊರೋನಾ ನಿಯಾಮವಳಿ ಪ್ರಕಾರ 20 ದಿನಗಳ ಕಾಲ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದೆ.
ಇನ್ನು ಅಧಿವೇಶನಕ್ಕೆ ಪ್ರತಿಪಕ್ಷಗಳೂ ಕೂಡ ಸಜ್ಜಾಗಿದೆ. ಕೊರೋನಾ 2ನೇ ಅಲೆಯಲ್ಲಿ ಅಪಾರ ಸಂಖ್ಯೆಯ ಸಾವು-ನೋವು ಸಂಭವಿಸಿತ್ತು. ಅಲ್ಲದೆ ಆಮ್ಲಜನಕದ ಕೊರತೆಯೂ ತೀವ್ರವಾಗಿ ಉಂಟಾಗಿತ್ತು. ಸರಕಾರದ ಲೋಪದೋಷಗಳ ಕುರಿತು ಚರ್ಚಿಸಲು ವಿಪಕ್ಷಗಳು ಸಿದ್ಧತೆ ನಡೆಸಿವೆ.