90ರ ದಶಕದಲ್ಲಿ ಬಾಲ್ಯವನ್ನ ಆನಂದಿಸಿದವರಿಗೂ ಈಗಿನ ಮಕ್ಕಳ ಬಾಲ್ಯಕ್ಕೂ ತುಂಬಾನೇ ವ್ಯತ್ಯಾಸವಿದೆ. 90 ರ ದಶಕದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದ ಕಾಲ. ಹೀಗಾಗಿ 90 ದಶಕದಲ್ಲಿ ಬಾಲ್ಯವನ್ನ ಕಂಡವರು ತಂತ್ರಜ್ಞಾನದ ಹೊಸ ಜಗತ್ತು ಹೇಗೆ ಉದಯವಾಗಿದೆ ಅನ್ನೋದನ್ನ ಕಂಡಿದ್ದಾರೆ. ಈಗ ಸ್ಮಾರ್ಟ್ ಫೋನ್, ಸ್ಮಾರ್ಟ್ ಟಿವಿ, ಬ್ಲೂಟುತ್ ಹೆಡ್ ಸೆಟ್ಗಳು ಬಂದಿದ್ದರೂ ಸಹ ಆಗಿನ ಜಮಾನದ ಮಷಿನರಿಗಳೇ ಹೆಚ್ಚು ವಿಶೇಷ ಎನಿಸುತ್ತವೆ.
ಬ್ಲಾಕ್ & ವೈಟ್ ಟಿವಿ : ಆಂಟೆನಾವನ್ನ ಬಳಸಿ ಬ್ಲಾಕ್ & ವೈಟ್ ಟಿವಿಯಲ್ಲಿ ಸಿನಿಮಾ ಧಾರವಾಹಿಯನ್ನ ನೋಡುತ್ತಿದ್ದ ದಿನಗಳು ನಿಮಗೆ ನೆನಪಿರಬಹುದು. ಆಲುಮಿನಿಯಂ ಆಂಟೆನಾವನ್ನ ತಿರುಗಿಸುವ ಮೂಲಕ ಚಾನೆಗಳನ್ನ ಬದಲಾಯಿಸುತ್ತಾ ಕಪ್ಪು ಬಿಳುಪು ಚಿತ್ರವನ್ನ ನೋಡಲಾಗ್ತಾ ಇತ್ತು.
ದೂರದರ್ಶನ : ಈಗಂತೂ ಒಟಿಟಿ ಫ್ಲಾಟ್ಫಾರ್ಮ್ನದ್ದೇ ಹವಾ. ಆದರೆ 90ರ ದಶಕದಲ್ಲಿ ದೂರದರ್ಶನ ಈಗಿನ ಒಟಿಟಿ ಫ್ಲಾಟ್ಫಾರ್ಮ್ಗಿಂತಲೂ ಹೆಚ್ಚು ಸದ್ದು ಮಾಡಿತ್ತು. 1993 ರವರೆಗೂ ಭಾರತೀಯ ಕುಟುಂಬಗಳಿಗೆ ಮನರಂಜನೆ ನೀಡುತ್ತಿದ್ದುದು ಕೇವಲ ಇದೊಂದೆ ಚಾನೆಲ್. ಲಾಕ್ಡೌನ್ ಕಾಲದಲ್ಲಿ ಮರು ಪ್ರಸಾರ ಕಂಡ ರಾಮಾಯಣ, ಮಹಾಭಾರತ ಇದೇ ಚಾನೆಲ್ನಲ್ಲಿ ಮೊದಲು ಪ್ರಸಾರಗೊಂಡಿತ್ತು.
ವಾಕ್ಮನ್ & ಆಡಿಯೋ ಕ್ಯಾಸೆಟ್ಗಳು : ಕ್ಯಾಸೆಟ್ಗಳನ್ನ ಹಾಕಿ ಟೇಪ್ ರೆಕಾರ್ಡರ್ಗಳಲ್ಲಿ ಹಾಡನ್ನ ಕೇಳುತ್ತಿದ್ದ ಕಾಲ ನಿಮಗೆ ನೆನಪಿರಬಹುದು. ಕ್ಯಾಸೆಟ್ಗಳಲ್ಲಿದ್ದ ಚಕ್ರಗಳನ್ನ ತಿರುಗಿಸುವ ಮೂಲಕ ಅದನ್ನ ರಿಪೇರಿ ಮಾಡೋಕೂ ಆಗ್ತಿತ್ತು. ಅಲ್ಲದೇ ಹಾಳಾದ ಕ್ಯಾಸೆಟ್ಗಳ ರೀಲ್ಗಳಂತೂ ಮಕ್ಕಳ ಬಲು ಇಷ್ಟದ ಆಟದ ಸಾಮಗ್ರಿಯೂ ಆಗಿತ್ತು.
ಇದು ಮಾತ್ರವಲ್ಲದೇ ಇಂದ್ರಜಾಲ ಕಾಮಿಕ್ಸ್, ಡಿಂಗ ತುಂತುರು, ಬಾಲಮಂಗಳದಂತಹ ಪುಸ್ತಕಗಳೂ ಮಾತ್ರವಲ್ಲದೇ ಲ್ಯಾಂಡ್ಲೈನ್ ದೂರುವಾಣಿಗಳು, ಗೋಲಿ ಸೋಡ ಇವೆಲ್ಲವೂ ನಮ್ಮ ಬಾಲ್ಯವನ್ನ ಇನ್ನಷ್ಟು ಸುಂದರ ಮಾಡಿರೋದ್ರಲ್ಲಿ ಯಾವುದೇ ಸಂದೇಹವಿಲ್ಲ.