ತರಕಾರಿ ಅಂಗಡಿಗಳಲ್ಲಿ ಸಾಲಾಗಿ ಜೋಡಿಸಿಟ್ಟ ನೇರಳೆ ಬಣ್ಣದ ಬದನೆಗಳನ್ನು ಕಂಡಾಗಲೇ ಬಾಯಲ್ಲಿ ನೀರೂರುತ್ತದೆ. ಇದರಿಂದ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು ಹಾಗೂ ಇದು ದೇಹಾರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.
ಬದನೆಯಲ್ಲಿ ನೀರಿನಂಶ ಹಾಗೂ ನಾರಿನಂಶ ಸಾಕಷ್ಟಿದ್ದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ಮಲಬದ್ಧತೆಯನ್ನು ದೂರಮಾಡುತ್ತದೆ.
ಹೃದಯದ ಆರೋಗ್ಯವನ್ನು ಕಾಪಾಡುವ ಇದು ಕೊಬ್ಬಿನಂಶವನ್ನು ಕಡಿಮೆ ಮಾಡುತ್ತದೆ. ಹೃದಯಕ್ಕೆ ಸರಾಗವಾಗಿ ರಕ್ತಸಂಚಾರವಾಗಲು ಅವಕಾಶ ಕಲ್ಪಿಸುತ್ತದೆ.
ಬದನೆಯಲ್ಲಿ ಕ್ಯಾಲೊರಿ ಮತ್ತು ಕಾರ್ಬೋಹೈಡ್ರೇಟ್ ಪ್ರಮಾಣ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ತೂಕ ಇಳಿಸಲು ಇದನ್ನು ಅತ್ಯುತ್ತಮವಾಗಿ ಬಳಸಬಹುದು.
ರಕ್ತಹೀನತೆ ಸಮಸ್ಯೆ ಇರುವವರು ಇದನ್ನು ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಸೇವಿಸಿ. ಇದು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಿ ಮೂಳೆಗಳನ್ನು ದೃಢಪಡಿಸುತ್ತದೆ. ಕ್ಯಾಲ್ಸಿಯಂ ಸಮಸ್ಯೆ ಇರುವವರು ನಿತ್ಯ ಇದನ್ನು ಸೇವಿಸುವುದು ಒಳ್ಳೆಯದು.