ಫುಡ್ ಡೆಲಿವರಿ ಕ್ಷೇತ್ರ ಪ್ರಪಂಚದಾದ್ಯಂತ ಯುವಕರಿಗೆ ಉದ್ಯೋಗ ನೀಡಿದೆ. ಇತ್ತೀಚೆಗೆ ಮಹಿಳೆಯರೂ ಈ ಕ್ಷೇತ್ರದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅಚ್ಚರಿ ಎಂದರೆ ರಾತ್ರಿ ವೇಳೆ ಯುವತಿಯೊಬ್ಬರು ಫುಡ್ ಡೆಲಿವರಿ ಮಾಡಿ ಸುದ್ದಿಯಾಗಿದ್ದಾರೆ. ವಿಶೇಷಗಳಲ್ಲಿ ವಿಶೇಷವೆಂದರೆ ಈ ಪ್ರಸಂಗ ನಡೆದಿರುವುದು ಪಾಕಿಸ್ತಾನದಲ್ಲಿ.
ಫೈಜಾ ಇಜಾಜ್ ಎಂಬುವರು ಆ ಮಹಿಳಾ ಡೆಲಿವರಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ, ಆಕೆ ರಾತ್ರಿಯಲ್ಲಿ ಹತ್ತಿರದ ಕೆ ರುರಿಗೆ ಆಶ್ಚರ್ಯಚಕಿತರಾಗಿ ಆ ಧೈರ್ಯಶಾಲಿಯನ್ನು ಭೇಟಿಯಾಗಲು ಧಾವಿಸಿದ್ದಾರೆ.
“ನಾನು ತುಂಬಾ ಉತ್ಸುಕಳಾಗಿ ಆಕೆಯನ್ನು ಬರಮಾಡಿಕೊಳ್ಳಲು ಗೇಟ್ನ ಹೊರಗೆ ನಿಂತಿದ್ದೆ. ನಾನು ನನ್ನ ಸ್ನೇಹಿತರು ಆಕೆಯನ್ನು ನೋಡಲು ಕಾತರದಿಂದ ಕಾಯ್ದಿದ್ದೆವು. ಆ ರೈಡರ್ ಬಂದ ನಂತರ ಆಕೆಯ ಉತ್ಸಾಹ ಮತ್ತು ಬೈಕ್ ಸವಾರಿ ಕೌಶಲ್ಯ ಸೇರಿದಂತೆ ಹಲವು ವಿಷಯಗಳ ಬಗ್ಗೆ 10 ನಿಮಿಷಗಳ ಕಾಲ ಮಾತನಾಡಿದೆವು’ ಎಂದು ಆಕೆಯ ಫೋಟೋದೊಂದಿಗೆ ಫೈಜಾ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಮೀರಾಬ್ ಹೆಸರಿ ಈ ಕೆಎಫ್‌ಸಿ ರೈಡರ್ ಫ್ಯಾಷನ್ ಡಿಸೈನ್ ಅಭ್ಯಾಸ ನಡೆಸುತ್ತಿದ್ದು, ತನ್ನ ಶಿಕ್ಷಣದ ವೆಚ್ಚ ಮತ್ತು ಅವಳ ದೈನಂದಿನ ಖರ್ಚುಗಳನ್ನು ಪೂರೈಸಲು ಡೆಲಿವರಿ ಏಜೆಂಟ್ ಆಗಿ ಅರೆಕಾಲಿಕ ಕೆಲಸ ಮಾಡುತ್ತಿದ್ದಳು ಎಂಬುದನ್ನು ವಿವರಿಸಿದ್ದಾರೆ.
ಆಕೆ ತನ್ನ ಸ್ವಂತ ಫ್ಯಾಶನ್ ಬ್ರಾಂಡ್ ಅನ್ನು ರೂಪಿಸಲು ಯೋಜಿಸಿದ್ದು, ತಾನು ಪದವಿ ಪಡೆಯುವವರೆಗೆ ಇನ್ನೂ 3 ವರ್ಷಗಳ ಕಾಲ ಕೆಎಫ್‌ಸಿ ರೈಡರ್ ಆಗಿ ಉಳಿಯಲು ಉದ್ದೇಶಿಸಿದ್ದಾಳೆ. ಈ ಪೋಸ್ಟ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ. 50 ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆ ಬಂದಿದೆ.