alex Certify ಎದೆಯುರಿಗೆ ಕಾರಣವಾಗಬಹುದು ಈ ಸಂಪೂರ್ಣ ಆಹಾರ..…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆಯುರಿಗೆ ಕಾರಣವಾಗಬಹುದು ಈ ಸಂಪೂರ್ಣ ಆಹಾರ..…!

ಗ್ಯಾಸ್ಟ್ರಿಕ್‌, ಅಸಿಡಿಟಿಯಂತಹ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರನ್ನೂ ಕಾಡುತ್ತಿವೆ. ಸಂಶೋಧನೆಯ ಪ್ರಕಾರ ಆಗಾಗ ಕಾಡುವ ಎದೆಯುರಿ, ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆಯ (GERD) ಸಂಕೇತವಾಗಿದೆ. ಇದು ಪ್ರಪಂಚದಾದ್ಯಂತ 13.98 ಪ್ರತಿಶತದಷ್ಟು ವಯಸ್ಕರಲ್ಲಿ ಕಂಡುಬರುತ್ತದೆ.

ಅನೇಕರು ಹಾಲು ಸೇವಿಸಿದಾಕ್ಷಣ ಎದೆಯುರಿ ಅನುಭವಿಸುತ್ತಾರೆ. ಹಾಗಾಗಿ ಹಾಲು ಮತ್ತು ಎದೆಯುರಿಗೆ ಸಂಬಂಧವಿರಬಹುದು ಎಂಬ ಅನುಮಾನ ಹಲವರಲ್ಲಿದೆ. ಕೆಲವೊಮ್ಮೆ ಇದು ಹಾಲಿನ ಪ್ರಕಾರವನ್ನು ಅವಲಂಬಿಸಿರುತ್ತದೆ. ಸಂಪೂರ್ಣ ಹಾಲು 2 ಪ್ರತಿಶತದಷ್ಟು ಕೊಬ್ಬನ್ನು ಹೊಂದಿರುತ್ತದೆ. ಇದು ಆಸಿಡ್ ರಿಫ್ಲಕ್ಸ್ ಅನ್ನು ಹೆಚ್ಚಿಸುತ್ತದೆ ಮತ್ತು ಎದೆಯುರಿಯನ್ನು ಪ್ರಚೋದಿಸುತ್ತದೆ.

ಸೋಯಾ ಹಾಲು, ಓಟ್ಸ್‌ ಹಾಲು, ಗೋಡಂಬಿ ಹಾಲು ಮತ್ತು ಅಕ್ಕಿ ಹಾಲು ಉತ್ತಮ ಆಯ್ಕೆಗಳಾಗಿವೆ. ಡೈರಿ ಉತ್ಪನ್ನಗಳು ಎದೆಯುರಿ ಉಂಟುಮಾಡಬಹುದು. ಹಾಗಾಗಿ ಹಸುವಿನ ಹಾಲಿನ ಬದಲು ಉಳಿದ ಹಾಲನ್ನು ಸೇವನೆ ಮಾಡಬಹುದು.

ಕೇವಲ ಹಾಲು ಮಾತ್ರ ಎದೆಯುರಿಗೆ ಕಾರಣವಾಗುವುದಿಲ್ಲ. ಇದು ನಮ್ಮ ಡಯಟ್‌ ಅನ್ನು ಸಹ ಅವಲಂಬಿಸಿರುತ್ತದೆ. ಇಂತಹ ಸಮಸ್ಯೆಗಳಿಂದ ದೂರವಿರಲು ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬೇಕು. ತಂಬಾಕು ಸೇವನೆ ಅಥವಾ ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

ಅಷ್ಟೇ ಅಲ್ಲ ಆಹಾರ ತಿಂದ ತಕ್ಷಣ ಮಲಗಬೇಡಿ. ಇದರಿಂದ ಹೊಟ್ಟೆ ಉಬ್ಬರಿಸುತ್ತದೆ ಮತ್ತು ಎದೆಯಲ್ಲಿ ಸುಡುವ ಸಂವೇದನೆಯನ್ನು ಉಂಟುಮಾಡಬಹುದು. ಬಿಗಿಯಾದ ಬಟ್ಟೆಗಳನ್ನು ಧರಿಸಿ ಆಹಾರವನ್ನು ಸೇವಿಸಬೇಡಿ. ಇದು ಕೂಡ ಎದೆಯುರಿ ಮತ್ತು ಚಡಪಡಿಕೆಗೆ ಕಾರಣವಾಗಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...