ಬಳಕೆಯಾದ ಫೇಸ್ಮಾಸ್ಕ್ಗಳಿಂದ ತಯಾರಾಯ್ತು ವೆಡ್ಡಿಂಗ್ ಗೌನ್…..! 21-07-2021 3:26PM IST / No Comments / Posted In: Corona Virus News, Corona, Latest News, Live News, International ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದ ಸ್ಯಾನಿಟೈಸರ್ ಹಾಗೂ ಫೇಸ್ ಮಾಸ್ಕ್ಗಳ ಬಳಕೆ ಸರ್ವೇ ಸಾಮಾನ್ಯ ಎಂಬಂತಾಗಿದೆ. ಫೇಸ್ ಮಾಸ್ಕ್ಗಳ ಬಳಕೆ ಹೆಚ್ಚಾದಂತೆ ಅವುಗಳ ತ್ಯಾಜ್ಯ ಕೂಡ ಹೆಚ್ಚಾಗುತ್ತಿದೆ. ಬ್ರಿಟನ್ನ ಫ್ಯಾಶನ್ ಡಿಸೈನರ್ ಮಾತ್ರ ಈ ಬಳಕೆಯಾಗಿ ಕಸದ ಬುಟ್ಟಿ ಸೇರಿದ್ದ ಫೇಸ್ ಮಾಸ್ಕ್ನಿಂದ ಮದುವೆ ಗೌನ್ ತಯಾರಿಸೋ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. 1500 ಫೇಸ್ ಮಾಸ್ಕ್ಗಳನ್ನ ಬಳಕೆ ಮಾಡಿ ಈ ಗೌನ್ನ್ನು ತಯಾರಿಸಲಾಗಿದೆ. ಡಿಸೈನರ್ ಟಾಮ್ ಸಿಲ್ವರ್ವುಡ್ ಎಂಬವರು ಈ ವೆಡ್ಡಿಂಗ್ ಗೌನ್ನ್ನು ತಯಾರಿಸಿದ್ದಾರೆ. ಈ ಗೌನ್ನ್ನು ಧರಿಸಿದ ಮಾಡೆಲ್ ಜೆಮಿಮಾ ಹ್ಯಾಂಬ್ರೋ ಎಂಬವರು ಲಂಡನ್ನ ಪೌಲ್ಸ್ ಕ್ಯಾಥೆಡ್ರಲ್ ಸಮೀಪ ಫೋಟೋಶೂಟ್ ಮಾಡಿಸಿದ್ದಾರೆ. ಬ್ರಿಟನ್ನಲ್ಲಿ ಪ್ರತಿ ವಾರ 100 ಮಿಲಿಯನ್ ಮಾಸ್ಕ್ಗಳು ತ್ಯಾಜ್ಯವಾಗಿ ಮಾರ್ಪಾಡಾಗುತ್ತಿವೆಯಂತೆ. ಇನ್ನು ಈ ಗೌನ್ನ್ನು ಹಿಚ್ಡ್ ವೆಬ್ಸೈಟ್ನಲ್ಲಿ ಶೇರ್ ಮಾಡಲಾಗಿದೆ. ಇಂದಿನಿಂದ ಯಾವುದೇ ಕೊರೊನಾ ನಿರ್ಬಂಧಗಳಿಲ್ಲದೇ ಇಂಗ್ಲೆಂಡ್ನಲ್ಲಿ ವಿವಾಹಗಳು ಜರುಗಲಿದೆ ಅನ್ನೋದೇ ಒಂದು ಸಂತೋಷಕರ ವಿಚಾರವಾಗಿದೆ. ಈ ಬೇಸಿಗೆಯಲ್ಲಿ ಸಾವಿರಕ್ಕೂ ಅಧಿಕ ವಿವಾಹ ಮಹೋತ್ಸವಗಳು ನೆರವೇರಲಿವೆ. ಯಾವುದೇ ನಿರ್ಬಂಧಗಳಿಲ್ಲದೇ ಎಲ್ಲಾರೂ ಎಂಜಾಯ್ ಮಾಡೋದನ್ನ ನೋಡೋದೇ ನಮಗೆ ಸಂತಸದ ವಿಚಾರವಾಗಿದೆ. ಆದರೆ ನಾವು ಕೊರೊನಾದಿಂದಾಗಿ ಉಂಟಾಗುತ್ತಿರುವ ಹೆಚ್ಚುವರಿ ತ್ಯಾಜ್ಯಗಳನ್ನೂ ನಿರ್ಲಕ್ಷಿಸುವಂತಿಲ್ಲ. ಎಂದು ಹಿಚ್ಡ್ ಸಂಪಾದಕಿ ಸಾರಾ ಅಲಾರ್ಡ್ ಹೇಳಿದ್ದಾರೆ.