ತನ್ನ ಕೂದಲನ್ನು ಒಣಗಿಸಿಕೊಳ್ಳಲು ದೇಶಿ ಜಗಾಡ್ ಒಂದಕ್ಕೆ ಕೈ ಹಾಕಿರುವ ಬಾಲಕನೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಕ್ಕರ್ ಒಂದರಿಂದ ಹೊರಗೆ ಬರುತ್ತಿರುವ ಹಬೆಯಿಂದ ಕೂದಲು ಒಣಗಿಸಿಕೊಳ್ಳಲು ನೋಡುತ್ತಿರುವ ಬಾಲಕನನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಪ್ರೆಶರ್ ಕುಕ್ಕರ್ ಅನ್ನೇ ಹೇರ್ ಡ್ರೈಯರ್ ಆಗಿ ಬಳಸುತ್ತಿರುವ ಜುಗಾಡ್ ಅನ್ನು ನೋಡಬಹುದಾಗಿದೆ. ಈ ವಿಡಿಯೋ ನಿಮಗೆ ನಗು ತರಿಸಿದರೂ, ಇಂಥ ಐಡಿಯಾಗಳೆಲ್ಲಾ ಜನರಿಗೆ ಹೇಗೆ ಹೊಳೆಯುತ್ತವೆ ಎಂದು ಚಿಂತಿಸುವಂತೆ ಮಾಡುತ್ತವೆ.
36 ಗಂಟೆಗಳಲ್ಲಿ ಮೂರು ಬಾರಿ ದರೋಡೆಗೆ ಯತ್ನ….!
ಹಬೆಯ ನೆರವಿನಿಂದ ತನ್ನ ಕೂದಲನ್ನು ಸೆಟ್ ಮಾಡಿಕೊಳ್ಳುತ್ತಿರುವ ಯುವಕನ ಈ ಜುಗಾಡ್ಗೆ 30 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳು ಸಿಕ್ಕಿದ್ದು, 5.5 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
https://youtu.be/TXC0LXsToPc