alex Certify ರಸ್ತೆ ಮಧ್ಯೆಯೇ ಒಂದೇ ನಿಮಿಷದಲ್ಲಿ ನಡೆಯಿತು ಪ್ಲಾಸ್ಟಿಕ್​ ಸರ್ಜರಿ: ಈ ಪವಾಡವನ್ನು ನೀವೂ ಒಮ್ಮೆ ನೋಡಿಬಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಮಧ್ಯೆಯೇ ಒಂದೇ ನಿಮಿಷದಲ್ಲಿ ನಡೆಯಿತು ಪ್ಲಾಸ್ಟಿಕ್​ ಸರ್ಜರಿ: ಈ ಪವಾಡವನ್ನು ನೀವೂ ಒಮ್ಮೆ ನೋಡಿಬಿಡಿ

ಟಿ.ವಿ ಧಾರಾವಾಹಿಗಳು ಇಂದಿನ ಹೆಚ್ಚಿನ ಜನರ ಅದರಲ್ಲಿಯೂ ಮಹಿಳೆಯರ ಅವಿಭಾಜ್ಯ ಅಂಗವಾಗಿದೆ. ದಿನಪೂರ್ತಿ ಧಾರಾವಾಹಿಗಳನ್ನು ಬಯ್ಯುತ್ತಲೇ ಒಂದು ದಿನವೂ ಮಿಸ್​ ಮಾಡಿಕೊಳ್ಳುವುದಿಲ್ಲ. 8-10 ವರ್ಷ ಎಳೆಯುತ್ತಲೇ ಧಾರಾವಾಹಿ ಸಾಗಿದರೂ, ಅದರಲ್ಲಿರುವ ಕಲಾವಿದರು ಬದಲಾದರೂ ಧಾರಾವಾಹಿ ಮಾತ್ರ ಮುಗಿಯುವುದಿಲ್ಲ.ಆದರೆ ವೀಕ್ಷಕರು ಹೆಚ್ಚಿದಂತೆ ಧಾರಾವಾಹಿಯನ್ನು ನಿರ್ದೇಶಕರು ಎಳೆಯುತ್ತಾ ಹೋಗುತ್ತಾರೆ. ಜನರಿಗೆ ಹೆಚ್ಚು ಇಷ್ಟವಾಗುವಂತೆ ಮಾಡಲು ಇನ್ನಿಲ್ಲದ ಸರ್ಕಸ್​ ಮಾಡುತ್ತಾರೆ.

ಅಂಥದ್ದೇ ಒಂದು ಧಾರಾವಾಹಿಯ ದೃಶ್ಯವೊಂದು ಇದೀಗ ಭಾರಿ ವೈರಲ್​ ಆಗುತ್ತಿದೆ. ನಿಜ ಜೀವನದಿಂದ ದೂರವಾದ, ಕಪೋಕಲ್ಪಿತ ದೃಶ್ಯವೊಂದು ಇದಾಗಿದ್ದು, ನೆಟ್ಟಿಗರು ಬಿದ್ದೂ ಬಿದ್ದೂ ನಗುವಂತಿದೆ. ಆದರೆ ಧಾರಾವಾಹಿ ಪ್ರಿಯರು ಮಾತ್ರ ಇದನ್ನು ನಿಜಜೀವನದ ಭಾಗವೇ ಎಂಬಂತೆ ನೋಡುತ್ತಿದ್ದಾರೆ.

ಅಷ್ಟಕ್ಕೂ ಟ್ರೋಲ್​ ಆಗಿರುವ ಈ ಧಾರಾವಾಹಿ ತುಣುಕು ಏನೆಂದರೆ ಇದರಲ್ಲಿ ಪಾತ್ರಧಾರಿಯೊಬ್ಬಳಿಗೆ ಅಪಘಾತವಾಗಿರುತ್ತದೆ. ಅವರ ಮುಖವೆಲ್ಲಾ ರಕ್ತಸಿಕ್ತವಾಗಿರುತ್ತದೆ. ಅವಳು ಮೃತಪಡುತ್ತಾಳೆ. ಆಂಬುಲೆನ್ಸ್​ನಿಂದ ಅವಳ ಮೃತದೇಹವನ್ನು ದಾರಿಯ ಮಧ್ಯೆ ಹಾಕುತ್ತಾರೆ. ಇತ್ತ ವಿಲನ್​ಗಳ ಕಾರ್ಯಾಚರಣೆ ಶುರು. ಸತ್ತಿರುವುದು ಬೇರೆ ಯಾರೋ ಎಂದು ತಿಳಿಸುವ ಸಲುವಾಗಿ ಬೇರೊಬ್ಬಳ ಮುಖವಾಡವನ್ನು ತಂದು ಆಕೆಯ ಶವಕ್ಕೆ ಅಂಟಿಸಲಾಗುತ್ತದೆ. ಆಗ ಆಕೆ ಅದೇ ಧಾರಾವಾಹಿಯ ಬೇರೊಬ್ಬ ಪಾತ್ರಧಾರಿಯ ಶವ ಎಂದು ನಂಬಿಸುವುದು ಅವರ ಉದ್ದೇಶ.

ರಸ್ತೆ ಮಧ್ಯೆಯಲ್ಲಿಯೇ ನಡೆಯಿತು ಪ್ಲಾಸ್ಟಿಕ್​ ಸರ್ಜರಿ ಎಂದು ಶೀರ್ಷಿಕೆ ನೀಡಿ ಭಾರಿ ತಮಾಷೆಯ ಬ್ಯಾಕ್​ಗ್ರೌಂಡ್​ ಹಾಕಿ ಈ ವಿಡಿಯೋ ವೈರಲ್​ ಆಗಿದ್ದು, ಎಷ್ಟು ಅಸಹಜ ಎನಿಸುವ ಸನ್ನಿವೇಶಗಳನ್ನು ಧಾರಾವಾಹಿಗಳಲ್ಲಿ ಸೃಷ್ಟಿಸಲಾಗುತ್ತಿದೆ ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...