alex Certify ಸೈನಿಕ ಮಗನನ್ನ ಯುದ್ಧಕ್ಕೆ ಕಳುಹಿಸೋ ಮುನ್ನ..! ಅಮ್ಮನ ನೋವು, ಸಂಕಟ ಹೇಳಿತ್ತು ಆ ಫೋಟೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈನಿಕ ಮಗನನ್ನ ಯುದ್ಧಕ್ಕೆ ಕಳುಹಿಸೋ ಮುನ್ನ..! ಅಮ್ಮನ ನೋವು, ಸಂಕಟ ಹೇಳಿತ್ತು ಆ ಫೋಟೋ..!

ಇತ್ತಿಚೆಗಷ್ಟೆ ‘ ವಿಶ್ವ ತಾಯಂದಿರ ದಿನ’ ಆಚರಿಸಲಾಯಿತು. ಎಲ್ಲರೂ ಅಮ್ಮನ ಬಗ್ಗೆ ಇರುವ ಭಾವನೆಯನ್ನ ತಮಗೆ ತಿಳಿದ ರೀತಿಯಲ್ಲಿ ವ್ಯಕ್ತ ಪಡಿಸಿದ್ದಾರೆ. ಆದರೆ ರಿಟೈರ್ಡ್ ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ ಅವರು ಇದೇ ತಾಯಂದಿರ ದಿನದಂದು ಸೊಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿರೋ ಫೋಟೋ ಎಂಥವರ ಕಣ್ಣಂಚನ್ನೂ ಕೂಡಾ ಒದ್ದೆ ಮಾಡಿ ಬಿಡು ಹಾಗಿದೆ.

ಈ ಫೋಟೋ ನೋಡಿ, ದೇಶ ರಕ್ಷಣೆಗೆ ಯೋಧ ಮಗ ಹೊರಟಿದ್ದಾನೆ. ಆತ ಹೊರಡುವ ತನಕ ಗಟ್ಟಿಯಾಗಿ ನಿಂತು, ಆತನಿಗೆನೇ ಧೈರ್ಯ ಹೇಳಿ ಕಳಿಸೋ ತಾಯಿ, ಆತನಿಗೆ ಕಾಣಿಸದಂತೆ ಕಣ್ಣಿರು ಹಾಕುವ ಪರಿ ನೋಡಿ. ರಣಭೂಮಿಗೆ ಹೊರಟ ಮಗನಿಗೆ ಏನಾದರೂ ಅಪಾಯ ಆದಿತೋ ಏನೋ ಅನ್ನೊ ದುಗುಡದ ಕಣ್ಣೀರು ಅದು. ಎಷ್ಟಂದರೂ ಹೆತ್ತ ಕರಳು ಅಲ್ವೆ..
ಗಡಿಯಲ್ಲಿ ಒರ್ವ ಯೋಧ ದೇಶದ ರಕ್ಷಣೆಯಲ್ಲಿ ನಿಂತಿರಬಹುದು. ಅದೇ ರೀತಿ ತನ್ನ ಮಕ್ಕಳು, ಕುಟುಂಬಕ್ಕಾಗಿ ಮನೆಯಲ್ಲಿ ತಾಯಂದಿರು ಕೂಡಾ ಯೋಧರಂತೆ ಹೋರಾಟ ಮಾಡುತ್ತಿರುತ್ತಾರೆ.

ದತ್ತು ವಿಚಾರದ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ

ಇದು ಒಂದು ತಾಯಿಯ ನೋವಲ್ಲ.. ಈ ರೀತಿ ಅದೆಷ್ಟೋ ತಾಯಂದಿರ ಹೃದಯ ನೋವನ್ನ ತಿಂದಿರುತ್ತೆ. ಆದರೆ ಎಂದಿಗೂ ಅವರು ತಮ್ಮ ಮಕ್ಕಳ ಮುಂದೆ ಕಣ್ಣಿರು ಹಾಕುವುದಿಲ್ಲ.. ತನಗೆ ಎಷ್ಟೆ ನೋವಾದರೂ ಅದನ್ನ ನುಂಗಿ ಎಲ್ಲರ ಮುಂದೆ ನಗ್ತಾ ನಗ್ತಾ, ತನ್ನ ಜೀವನ ಸಾಗಿಸುತ್ತಾಳೆ.

ಇದು ನನ್ನ ಹೃದಯಕ್ಕೆ ಹತ್ತಿರವಾದ ಫೋಟೋ. ಈ ಫೋಟೋ ನನ್ನ ಅಮ್ಮನದ್ದು, ನನಗೆ ಯುದ್ಧಕ್ಕೆ ಕಳುಹಿಸುವಾಗ ತೆಗೆದ ಫೋಟೋ ಇದು. ನಾನು ನನ್ನ ಅಮ್ಮನನ್ನ ಮೂರು ವರ್ಷದ ಹಿಂದೆಯೇ ಕಳೆದುಕೊಂಡಿದ್ದೇನೆ. ಈ ಫೋಟೋ ನೋಡಿದಾಗಲೆಲ್ಲ ನಾನು ಭಾವುಕನಾಗುತ್ತೇನೆ. ನನ್ನ ಅಮ್ಮನಂತೆಯೇ ಈ ರೀತಿ ಸಂಕಟ ಪಡುವ ಪ್ರತಿ ಯೋಧನ ಅಮ್ಮನನ್ನ ಈ ಫೋಟೋದಲ್ಲಿ ಕಾಣುತ್ತೇನೆ.
ಸೊಶಿಯಲ್ ಮಿಡಿಯಾದಲ್ಲಿ ಈ ಫೋಟೋಗೆ ಅಂದಾಜಿಗೂ ಮೀರಿ ಲೈಕ್ಸ್ ಸಿಗ್ತಿವೆ. ಜೊತೆಗೆ ಇದೇ ಫೋಟೋ ನೂರಾರು, ಸಾವಿರಾರು ಜನರನ್ನ ಭಾವುಕರನ್ನಾಗಿಯೂ ಮಾಡ್ತಾ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...