ಪೈನಾಪಲ್ ಹಣ್ಣಿನ ಚಗರೆಯನ್ನು ತೆಗೆದು ಅದನ್ನು ಕಟ್ ಮಾಡಿ ತಿನ್ನುವುದು ಎಂದರೆ ನಮ್ಮಲ್ಲಿ ಅನೇಕರಿಗೆ ಕೈಲಾಗದ ಕೆಲಸ. ಆದರೆ ಹಣ್ಣುಗಳನ್ನು ಕತ್ತರಿಸುವುದೂ ಒಂದು ಕಲೆ. ಈ ಕಲೆಯಲ್ಲಿ ನಿಷ್ಣಾತರಾದ ಕೆಲವು ಮಂದಿ ನಮ್ಮ ನಡುವೆಯೇ ಇರುತ್ತಾರೆ.
ಇಂಥದ್ದೇ ಒಬ್ಬ ಪಾರಂಗತ ಪೈನಾಪಲ್ ಅನ್ನು ಕತ್ತರಿಸುವ ಕಲೆಯನ್ನು ತೋರುತ್ತಿರುವ ವಿಡಿಯೋವೊಂದು ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.
ಪೈನಾಪಲ್ ಹಣ್ಣನ್ನು ರೇಖಾಗಣಿತದ ಸರಳ ಸಿದ್ಧಾಂತ ಬಳಸಿಕೊಂಡು ಕತ್ತರಿಸುವ ಈ ಅದ್ಭುತ ಕಲೆಯನ್ನು ನೀವೂ ಒಮ್ಮೆ ನೋಡಿ ಆನಂದಿಸಿ.
ಪೈನಾಪಲ್ ಕತ್ತರಿಸುವುದು ಇಷ್ಟು ಸರಳವೇ ಎಂದು ವೀಕ್ಷಕರು ಉದ್ಘಾರ ತೆಗೆದಿದ್ದಾರೆ. ಮತ್ತೂ ಕೆಲವರು ಪೈನಾಪಲ್ ಕಟ್ ಮಾಡುವ ಈ ಹೊಸ ಕಲೆ ಕಂಡು ಬೆರಗಾಗಿದ್ದಾರೆ.
https://youtu.be/wR05x946aXo