ಇಂಟರ್ನೆಟ್ನಲ್ಲಿ ವಿಲಕ್ಷಣ, ವಿಶಿಷ್ಟ, ಮನಸೆಳೆಯುವ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ಅಂಥದ್ದೇ ವಿಭಿನ್ನ ವಿಡಿಯೋವೊಂದು ವೈರಲ್ ಆಗಿದೆ. ಸಾಬೂನಿನ ದೈತ್ಯ ಗುಳ್ಳೆಯ ಅದ್ಭುತ ವಿಡಿಯೋವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋವನ್ನು ಯೂಟ್ಯೂಬ್ನಲ್ಲಿ ವೈರಲ್ ಹಾಗ್ ಪೋಸ್ಟ್ ಮಾಡಿದ್ದಾರೆ.
ಕಿರು ವಿಡಿಯೊದಲ್ಲಿ, ದೈತ್ಯ ಸೋಪ್ ಗುಳ್ಳೆಯ ಒಳಗಿನಿಂದ ಒಂದು ನೋಟವು ಗೋಚರಿಸುತ್ತದೆ. ಗುಳ್ಳೆಯು ಬಣ್ಣಗಳ ವರ್ಣಪಟಲವನ್ನು ಪ್ರತಿಬಿಂಬಿಸುತ್ತದೆ. ಇದು ಮಳೆಬಿಲ್ಲನ್ನು ನೆನಪಿಸುತ್ತದೆ. ದೊಡ್ಡದಾಗಿ ಉತ್ಪತ್ತಿಯಾದ ಗುಳ್ಳೆಯು ಕೊನೆಗೆ ತೆಳುವಾದ ಗಾಳಿಯಲ್ಲಿ ಕಣ್ಮರೆಯಾಗಿ ಹೋಗಿದೆ. ಈ ಅದ್ಭುತ ದೃಶ್ಯ ನೋಡಲು ಕಣ್ಣುಗಳೆರಡು ಸಾಲದು.
ಈ ಸುಂದರ ವಿಡಿಯೋವನ್ನು ವೀಕ್ಷಿಸಿದ ನಂತರ ನೆಟ್ಟಿಗರು ದಿಗ್ಭ್ರಮೆಗೊಂಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಬಳಕೆದಾರರು ಪ್ರತಿಕ್ರಿಯೆಗಳ ಮಳೆಯನ್ನೇ ಹರಿಸಿದ್ದಾರೆ. ಸೋಪ್ ಬಬಲ್ನ ಬಣ್ಣಗಳು ಬಿಳಿ ಬೆಳಕಿನಿಂದ ಕೂಡಿರುತ್ತವೆ. ಇದು ಮಳೆಬಿಲ್ಲಿನ ಎಲ್ಲಾ ಬಣ್ಣಗಳನ್ನು ಹೊಂದಿರುತ್ತದೆ. ಬಿಳಿ ಬೆಳಕು ಪ್ರತಿಫಲಿಸಿದಾಗ, ಕೆಲವು ಬಣ್ಣಗಳು ಪ್ರಕಾಶಮಾನವಾಗಿರುತ್ತವೆ ಮತ್ತು ಇತರವುಗಳು ಕಣ್ಮರೆಯಾಗುತ್ತವೆ.