ಕಾಡಿನಲ್ಲಿ ಪರಭಕ್ಷಕ ಬೇಟೆಯಾಡುವುದನ್ನು ತೋರಿಸುವ ಹಲವಾರು ವೀಡಿಯೊಗಳು ಅಂತರ್ಜಾಲದಲ್ಲಿವೆ. ಈಗ, ಕಮೋಡೊ ಡ್ರ್ಯಾಗನ್ ಎಂದು ಕರೆಯಲಾಗುವ ಬೃಹದಾಕಾರದ ಉಡವೊಂದು ಜಿಂಕೆಯ ಮೇಲೆ ದಾಳಿ ಮಾಡಿ ನಂತರ ಒಂದೇ ಗುಟುಕಿನಲ್ಲಿ ಜೀವಂತವಾಗಿ ನುಂಗುವ ಭಯಾನಕ ವೀಡಿಯೊ ವೈರಲ್ ಆಗಿದೆ.
ಜಿಂಕೆ ಸಾವಿನ ದವಡೆಯಿಂದ ಹೊರಬರಲು ಪ್ರಯತ್ನಿಸಿದರೂ ಎಲ್ಲಾ ಪ್ರಯತ್ನಗಳು ವ್ಯರ್ಥವಾಗುವುದನ್ನು ವಿಡಿಯೋದಲ್ಲಿ ನೋಡಬಹುದು.
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಉಡ ತನ್ನ ಚೂಪಾದ ಹಲ್ಲುಗಳಿಂದ ಜಿಂಕೆ ಮೇಲೆ ದಾಳಿ ಮಾಡುವುದನ್ನು ನೋಡಬಹುದು. ಜಿಂಕೆಯ ಕುತ್ತಿಗೆಯನ್ನೇ ಹಿಡಿಯುವ ಕಾರಣ, ಜಿಂಕೆ ತಪ್ಪಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ.
ಕೆಲವೇ ಸೆಕೆಂಡುಗಳಲ್ಲಿ, ಇಡೀ ಜಿಂಕೆಯನ್ನು ಎಳೆದುಕೊಂಡು ಹೋಗಿ ಒಂದೇ ಗುಟುಕಿಗೆ ನುಂಗಿ ಹಾಕುತ್ತದೆ. ಈ ಭಯಾನಕ ವಿಡಿಯೋ ನೋಡಿ ನೆಟ್ಟಿಗರ ಮೈ ಝುಂ ಎನ್ನುತ್ತದೆ.
https://youtu.be/Ld1CQr3pdwI