ಪ್ರೇಮ ನಿವೇದನೆಯ ಸುಂದರ ಕ್ಷಣಗಳನ್ನು ಸದಾ ನಮ್ಮೊಂದಿಗೆ ಇಟ್ಟುಕೊಳ್ಳಬೇಕೆಂದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ನಾವೇಕೆ ಇದ್ದಕ್ಕಿದ್ದಂತೆ ಈ ಕುರಿತು ಮಾತನಾಡುತ್ತಿದ್ದೇವೆ ಎಂದು ನಿಮಗೆ ಅನಿಸುತ್ತಿರಬಹುದು. ತನ್ನ ಮನದನ್ನೆಗೆ ಪ್ಯಾರಿಸ್‌ನ ಐಫೆಲ್ ಟವರ್ ಮುಂದೆ ವ್ಯಕ್ತಿಯೊಬ್ಬ ಪ್ರಪೋಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಪ್ರಪೋಸಲ್ ಕಥೆಗೆ ಕೊನೆಯಲ್ಲಿ ಕೊಟ್ಟಿರುವ ಟ್ವಿಸ್ಟ್ ನಿಮಗೆ ಭಾರೀ ಇಷ್ಟವಾಗಬಹುದು.
ಇಸುಜು ಪಿಕಪ್ ವಾಹನಗಳ ಬೆಲೆ 2 ಲಕ್ಷ ರೂ.ವರೆಗೆ ಏರಿಕೆ, ಖರೀದಿದಾರರ ಜೇಬಿಗೆ ಭಾರಿ ಕತ್ತರಿ
ಇನ್‌ಸ್ಟಾಗ್ರಾಂನಲ್ಲಿ ’ಗುಡ್ ನ್ಯೂಸ್ ಮೂವ್ಮೆಂಟ್ ಆನ್ ಫ್ರೈಡೇ’ ಹೆಸರಿನ ಪೇಜ್‌ನಲ್ಲಿ ಪೋಸ್ಟ್ ಆಗಿ ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ, ಪ್ರೇಮಿಗಳ ಹಿಂದೆ ಐಫೆಲ್ ಟವರ್ ಬ್ಯಾಕ್ ಗ್ರೌಂಡ್ ಆಗಿರುವುದನ್ನು ನೋಡಬಹುದಾಗಿದೆ.
2019ರಲ್ಲಿ ಡೇಟಿಂಗ್ ಅಪ್ಲಿಕೇಶನ್ ಒಂದರ ಮೂಲಕ ಭೇಟಿಯಾದ ವೇಲೆನ್ಸಿಯಾ ಮತ್ತು ಲಾಮರ್ ತಮ್ಮ ಮೊದಲ ಡೇಟ್ ಫಿಕ್ಸ್ ಮಾಡುವ ವೇಳೆ ಸ್ವಲ್ಪ ಫಜೀತಿಗೆ ಸಿಲುಕಿದ್ದರು. ಬೌಲಿಂಗ್ ಅಂಗಳದಲ್ಲಿ ಫಿಕ್ಸ್ ಮಾಡಿದ್ದ ಇಬ್ಬರ ಮೊದಲ ಡೇಟ್ ಸಾಧ್ಯವಾಗಲಿಲ್ಲ. ಕಾರಣವೆಂದರೆ, ಲ್ಯಾಮರ್ ಲೇಟಾಗಿ ಬಂದ ಕಾರಣ ಆ ವೇಳೆಗೆ ವೇಲೆನ್ಸಿಯಾ ಅಲ್ಲಿಂದ ಹೊರಟುಬಿಟ್ಟಿದ್ದರು. ಅದೃಷ್ಟವಶಾತ್ ಇಬ್ಬರೂ ಭೇಟಿಯಾಗುವ ಸಂದರ್ಭ ಒದಗಿ ಬಂದಿದೆ.
ಇತ್ತೀಚೆಗೆ ತಮ್ಮ ಸ್ನೇಹಿತರೊಬ್ಬರ ಹುಟ್ಟುಹಬ್ಬಕ್ಕೆಂದು ಇಬ್ಬರೂ ಪ್ಯಾರಿಸ್‌ಗೆ ಆಗಮಿಸಿದ್ದರು. ಈ ವೇಳೆ, ಐಫೆಲ್ ಟವರ್ ಬಳಿ ತಮ್ಮ ಫೋಟೋಶೂಟ್ ಮಾಡಬೇಕೆಂದು ಲ್ಯಾಮರ್ ಸೂಚಿಸಿದ್ದು, ತನ್ನ ಮನದನ್ನೆಗೆ ಪ್ರಪೋಸ್ ಮಾಡುವ ಐಡಿಯಾವನ್ನೂ ಸಹ ಅಲ್ಲಿಯೇ ಇಟ್ಟುಕೊಂಡಿದ್ದರು.
ಛಾಯಾಗ್ರಾಹಕ ತಮ್ಮ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದಾರೆ ಎಂದು ಭಾವಿಸಿದ್ದ ವೇಲೆನ್ಸಿಯಾಗೆ, ಕೂಡಲೇ ಮಂಡಿಯೂರಿ ಕುಳಿತ ಲ್ಯಾಮರ್ ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ.
ವೇಲೆನ್ಸಿಯಾ ಈ ಪ್ರಪೋಸಲ್ ಅನ್ನು ಖುಷಿಯಾಗಿ ಒಪ್ಪಿದ್ದಾರೆ. ಇಬ್ಬರಿಗೂ ಇದು ವೈಯಕ್ತಿಕವಾಗಿ ಎರಡನೇ ಮದುವೆಯಾಗಲಿದೆ.