alex Certify ಹುಡುಗಿಯ ಪವರ್‌ ಫುಲ್‌ ಡಾನ್ಸ್‌ ಗೆ ಮೂಕವಿಸ್ಮಿತರಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಡುಗಿಯ ಪವರ್‌ ಫುಲ್‌ ಡಾನ್ಸ್‌ ಗೆ ಮೂಕವಿಸ್ಮಿತರಾದ ನೆಟ್ಟಿಗರು

ಟೀನೇಜ್ ಯುವತಿಯ ಡ್ಯಾನ್ಸ್ ನೋಡಿದ ನೆಟ್ಟಿಗರು ಮೂಕವಿಸ್ಮಿತರಾಗಿದ್ದಾರೆ. ಸೆಪ್ಟೆಂಬರ್ 26 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಂತರ, ಅಲಿಸಾ ಗುಟೈರೆಜ್-ಸಿಯೆರಾ ಅವರ ಡ್ಯಾನ್ಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಸದ್ಯ ಈ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.

ಅಲಿಸಾಳ ಡ್ಯಾನ್ಸ್ ವೀಕ್ಷಿಸಿದ ನೆಟ್ಟಿಗರು ನಿಜಕ್ಕೂ ಬೆರಗುಗೊಂಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಬಹುಪಾಲು ಜನರು ಮೂಕರಾಗಿದ್ದರು ಮತ್ತು ಆಕೆಯ ನೃತ್ಯದ ಚಲನೆಗಳನ್ನು ಕಂಡು ಬೆರಗಾಗಿರುವುದಾಗಿ ಪ್ರತಿಕ್ರಿಯಿಸಿದ್ದಾರೆ.

ಯೂಟ್ಯೂಬ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಿಂದ ಹಂಚಿಕೊಳ್ಳಲ್ಪಟ್ಟ ಕ್ಲಿಪ್, ಅಲಿಸಾಳ ಉಗ್ರ ನೃತ್ಯ ಮತ್ತು ಸಾಟಿಯಿಲ್ಲದ ಶಕ್ತಿಯನ್ನು ತೋರಿಸುತ್ತದೆ. ಇದನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಇನ್ನು ಈ ಯೂಟ್ಯೂಬ್ ಸಾಮಾನ್ಯವಾಗಿ ಸೃಜನಶೀಲ ವಿಡಿಯೊಗಳನ್ನು ಹಂಚಿಕೊಳ್ಳುತ್ತದೆ. ಅದು ನೋಡುಗರನ್ನು ದಿಗ್ಭ್ರಮೆಗೊಳಿಸುತ್ತದೆ. ನೀವು ನಾಯಿ ಪ್ರೇಮಿ ಆಗಿದ್ದಲ್ಲಿ, ಮುದ್ದಾದ ನಾಯಿಮರಿಗಳು ಚೆಂಡಿನ ಹಳ್ಳಕ್ಕೆ ಜಿಗಿಯುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋ ನೋಡಿ ಇದನ್ನು ‘ದಿನದ ಪರಿಪೂರ್ಣ ಆರಂಭ’ ಅಂತಾ ನೆಟ್ಟಿಗರು ಕರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...